ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಹಿಜಬ್- ಕೇಸರಿ ಶಾಲು ಸಂಘರ್ಷ ನಟೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ವೀಡಿಯೋವೊಂದನ್ನು ಟ್ವೀಟ್ ಮಾಡಿ, ಭಾರತದ ಯುವಕರು ಈ ರೀತಿ ಇಬ್ಭಾವಾಗುತ್ತಿರುವುದನ್ನು ನೋಡುತ್ತಿದ್ದರೆ ತುಂಬಾ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ
Advertisement
Makes me so sad to see the youth of India divided- pic.twitter.com/eOpFsNjuFl
— Ramya/Divya Spandana (@divyaspandana) February 9, 2022
Advertisement
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಬ್-ಕೇಸರಿ ಫೈಟ್‍ಗೆ ಲಗಾಮು ಹಾಕುವ ನಿಟ್ಟಿನಲ್ಲಿ ಸರ್ಕಾರ ಸಮವಸ್ತ್ರ ಕಡ್ಡಾಯ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶಕ್ಕೆ ಹಿಜಬ್‍ಧಾರಿ ವಿದ್ಯಾರ್ಥಿಗಳು ಡೋಂಟ್‍ಕೇರ್ ಅಂದಿದ್ದಾರೆ. ಮತ್ತೆ ಮೊಂಡುವಾದ ಮಾಡಿ ಹಿಜಬ್ ಧರಿಸಿಯೇ ಎಲ್ಲೆಡೆ ವಿದ್ಯಾರ್ಥಿನಿಯರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹಿಜಬ್ ಹೋರಾಟದ ಮೂಲ ಜಿಲ್ಲೆ ಉಡುಪಿಯಲ್ಲಿ ಇಂದು ಹೈಡ್ರಾಮಾ ಜೋರಾಗಿತ್ತು. ಸರ್ಕಾರದ ಆದೇಶ ಬಂದ ಹಿನ್ನೆಲೆಯಲ್ಲಿ ಇಂದು ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಹಗ್ಗಜಗ್ಗಾಟ ಜೋರಾಗಿತ್ತು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
Advertisement
Advertisement
ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಸ್ಕಾರ್ಫ್‍ಗಾಗಿ ಪ್ರತಿಭಟನೆ ಮಾಡುತ್ತಿರುವ 22 ವಿದ್ಯಾರ್ಥಿನಿಯರು ಬುರ್ಖಾ ತೊಟ್ಟು ಬಂದಿದ್ದರು. ಸರ್ಕಾರದ ಆದೇಶವನ್ನು ಪ್ರಾಂಶುಪಾಲರು ಪ್ರಾಧ್ಯಾಪಕರು ವಿವರಿಸಿದರೂ ಅದಕ್ಕೆ ವಿದ್ಯಾರ್ಥಿನಿಯರು ಒಪ್ಪಲಿಲ್ಲ. ವಾಪಸ್ ಕಳಿಸೋಕೆ ನೋಡಿದ್ರು. ಕೊನೆಗೆ ವಿದ್ಯಾರ್ಥಿಗಳು ಹೊರಗಡೆ ನಿಲ್ಲೋದು ಬೇಡ ಅಂತಾ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸೋ ವ್ಯವಸ್ಥೆ ಮಾಡಿದ್ರು. 22 ವಿದ್ಯಾರ್ಥಿನಿಯರು ಆ ರೂಂ ಸೇರಬೇಕಾಯ್ತು. ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಸಭಾಂಗಣದ ಕೋಣೆಯಲ್ಲಿ ಕಾಲಕಳೆದರು. ಕೊನೆಗೆ ಕೂತು ಕೂತು ಸಂಜೆ ಮನೆಗೋದ್ರು.
ಇಷ್ಟಾಗುತ್ತಲೇ ಜಿಲ್ಲೆಯ ಹಲವು ಕಾಲೇಜಿನಲ್ಲಿ ಕೇಸರಿ ವರ್ಸಸ್ ಹಿಜಬ್ ಜಟಾಪಟಿ ನಡೆಯಿತು. ನಿನ್ನೆ ಹೈಕೋರ್ಟ್ ನಲ್ಲಿ ವಾದ-ಪ್ರತಿವಾದಗಳ ಮಧ್ಯೆಯೂ ರಾಜ್ಯಾದ್ಯಂತ ತಿಕ್ಕಾಟ ಮುಂದುವರಿದಿತ್ತು. ಇಂದು ಮತ್ತೆ 2.30ಗೆ ಈ ಸಂಬಂಧ ವಿಚಾರಣೆ ನಡೆಯಲಿದೆ.