ಕರಾವಳಿ ಭಾಗದ ಅಡುಗೆ ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಮೀನು ಸಾರು (Fish Curry). ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಹೀಗೆ ಬೇರೆ ಬೇರೆ ರಾಜ್ಯಗಳ ಕರಾವಳಿ ಭಾಗಗಳಲ್ಲಿ ಮೀನು ಸಾರನ್ನು ಭಿನ್ನ ವಿಭಿನ್ನವಾಗಿಯೇ ತಯಾರಿಸುತ್ತಾರೆ. ನಾವಿಂದು ಕೇರಳ ಶೈಲಿಯ ಮೀನು ಸಾರು ‘ಮೀನ್ ಮೌಲಿ’ (Meen Moilee) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ವಿಭಿನ್ನ ರುಚಿ ನೀಡುವ ಈ ರೆಸಿಪಿಯನ್ನೂ ನೀವೊಮ್ಮೆ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮೀನು – 4
ಹೆಚ್ಚಿದ ಈರುಳ್ಳಿ – 1
ಸೀಳಿದ ಹಸಿ ಮೆಣಸಿನಕಾಯಿ – 2
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಕರಿಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ ಹಾಲು – 1 ಕಪ್
ಕರಿಬೇವಿನ ಎಲೆ – ಕೆಲವು
ಸಾಸಿವೆ – 1 ಟೀಸ್ಪೂನ್
ಅರಶಿನ – ಅರ್ಧ ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಸಖತ್ ಟೇಸ್ಟಿ ಬೆಳ್ಳುಳ್ಳಿ ಚಿಕನ್ ರೈಸ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೀನಿನ ತುಂಡುಗಳಿಗೆ ನಿಂಬೆ ರಸ, ಉಪ್ಪು ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅನ್ನು ಹಚ್ಚಿ, ಅರ್ಧ ಗಂಟೆ ಪಕ್ಕಕ್ಕಿಡಿ.
* ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ, ಸ್ವಲ್ಪ ಹುರಿಯಿರಿ.
* ಬಳಿಕ ಈರುಳ್ಳಿ ಸೇರಿಸಿ, 3-4 ನಿಮಿಷ ಹುರಿದುಕೊಳ್ಳಿ.
* ಈಗ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನಕಾಯಿ, ಅರಶಿನ, ಉಪ್ಪು, ತೆಂಗಿನ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಮೀನಿನ ತುಂಡುಗಳನ್ನು ಸೇರಿಸಿ, ಸಣ್ಣ ಉರಿಯಲ್ಲಿ 7-8 ನಿಮಿಷ ಬೇಯಿಸಿಕೊಳ್ಳಿ.
* ಬಳಿಕ ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
* ನಂತರ ಮುಚ್ಚಳ ತೆಗೆದು, ಕೊತ್ತಂಬರಿ ಸೊಪ್ಪು ಸೇರಿಸಿ.
* ಇದೀಗ ಮೀನ್ ಮೌಲಿ ತಯಾರಾಗಿದ್ದು, ಅನ್ನ, ದೋಸೆ ಅಥವಾ ಆಪಂನೊಂದಿಗೆ ಸವಿಯಿರಿ. ಇದನ್ನೂ ಓದಿ: ಮಂಗಳೂರು ಸ್ಟೈಲ್ನಲ್ಲಿ ಚಿಕನ್ ಸುಕ್ಕ ಮಾಡಿ – ನಾಲಿಗೆ ಚಪ್ಪರಿಸಿ ಸವಿಯಿರಿ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k