ಕೊಲ್ಹಾಪುರಿ ಪಂದ್ರಾ ರಸ ಎಂಬುದು ಮಹಾರಾಷ್ಟ್ರದ ಸಾಂಪ್ರದಾಯಿಕ ಖಾದ್ಯ. ಅದರ ಶ್ರೀಮಂತ ಮತ್ತು ಅದ್ಭುತ ಸುವಾಸನೆಯ ಬಿಳಿ ಗ್ರೇವಿಗೆ ಫೇಮಸ್ ಆಗಿದೆ. ಇದನ್ನು ಮಸಾಲೆ ಪದಾರ್ಥಗಳು, ತೆಂಗಿನಕಾಯಿ ಮತ್ತು ಗೋಡಂಬಿಯ ಮಿಶ್ರಣದಲ್ಲಿ ಚಿಕನ್ ಅನ್ನು ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಮಹಾರಾಷ್ಟ್ರದ ಕೊಲ್ಹಾಪುರ ನಗರದಿಂದ ಈ ಅಡುಗೆಗೆ ಅದರ ಹೆಸರು ಬಂದಿದೆ. ತೃಪ್ತಿಕರ ಊಟಕ್ಕಾಗಿ ಅನ್ನ ಅಥವಾ ರೊಟ್ಟಿಯೊಂದಿಗೆ ಇದನ್ನು ಬಡಿಸಿ.
Advertisement
ಬೇಕಾಗುವ ಪದಾರ್ಥಗಳು:
ಚಿಕನ್ – ಅರ್ಧ ಕೆಜಿ
ಮೊಸರು – 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ತುರಿದ ತೆಂಗಿನಕಾಯಿ – ಕಾಲು ಕಪ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಗಸಗಸೆ – 1 ಟೀಸ್ಪೂನ್
ತಾಜಾ ಕೊತ್ತಂಬರಿ ಸೊಪ್ಪು – ಅಲಂಕರಿಸಲು
ಎಣ್ಣೆ – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ನೀವೂ ಮನೆಯಲ್ಲಿ ಮಾಡಿ ಹಾಂಗ್ ಕಾಂಗ್ ಫ್ರೈಡ್ ರೈಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಚಿಕನ್ ತುಂಡುಗಳನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಮತ್ತು ಉಪ್ಪಿನೊಂದಿಗೆ ಮ್ಯಾರಿನೇಟ್ ಮಾಡಿ.
* ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ.
* ಗೋಡಂಬಿ, ತೆಂಗಿನಕಾಯಿ, ಕೊತ್ತಂಬರಿ, ಜೀರಿಗೆ, ಗಸಗಸೆಯನ್ನು ಸೇರಿಸಿ, ಮಿಶ್ರಣವು ಗೋಲ್ಡನ್ ಬ್ರೌನ್ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
* ಈ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಪಕ್ಕಕ್ಕಿಡಿ.
* ಅದೇ ಬಾಣಲೆಗೆ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
* ರುಬ್ಬಿದ ಪೇಸ್ಟ್ ಅನ್ನು ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಕೊಲ್ಹಾಪುರಿ ಪಂದ್ರಾ ರಸವನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಬಿಸಿಯಾಗಿ ಬಡಿಸಿ. ಇದನ್ನೂ ಓದಿ: ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ಮಾಡ್ನೋಡಿ