ರಾಜಸ್ಥಾನದ ಈ ಸಾಂಪ್ರದಾಯಿಕ ಮಟನ್ ಕರಿ ರೆಸಿಪಿ ಮದ್ರಾಸ್ ಶೈಲಿಯ ಅಡುಗೆಗೆ ಉತ್ತಮ ಪರ್ಯಾಯ. ಇಲ್ಲಿ ಸುಮಯ್ಯ ಮಟನ್ ಬಳಸಲಾಗುತ್ತದೆ. ಆದರೆ ಈ ರೆಸಿಪಿಯನ್ನು ಬೇಕೆಂದರೆ ಇತರ ಮಾಂಸವನ್ನು ಬಳಸಿಯೂ ತಯಾರಿಸಬಹುದು. ರಾಜಸ್ಥಾನ ಶೈಲಿಯ ಲಾಲ್ ಮಾಸ್ ಮಟನ್ ಕರಿ ನೀವೂ ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಮಟನ್ ಮಾಂಸ – 1 ಕೆಜಿ
ಲವಂಗ – 6
ದಾಲ್ಚಿನ್ನಿ ಎಲೆ – 1
ಕಪ್ಪು ಏಲಕ್ಕಿ – 1
ಹೆಚ್ಚಿದ ಈರುಳ್ಳಿ – 1
ತುರಿದ ಶುಂಠಿ – 1 ಇಂಚು
ತುರಿದ ಬೆಳ್ಳುಳ್ಳಿ – 4
ಕಾಶ್ಮೀರಿ ಮೆಣಸಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಅರಿಶಿನ – ಕಾಲು ಟೀಸ್ಪೂನ್
ಮೊಸರು – 400 ಗ್ರಾಂ
ಬೆಳ್ಳುಳ್ಳಿ – 1
ನೀರು – 50 ಮಿ.ಲೀ.
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಎಣ್ಣೆ – 3 ಟೀಸ್ಪೂನ್ ಇದನ್ನೂ ಓದಿ: 15 ನಿಮಿಷದಲ್ಲಿ ಮಾಡೋ ಚಿಕನ್ ನೂಡಲ್ ಸೂಪ್ ರೆಸಿಪಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ತಳವಿರುವ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಉರಿಯನ್ನು ಕಡಿಮೆ ಮಾಡಿ ಲವಂಗ, ಕಪ್ಪು ಏಲಕ್ಕಿ ಮತ್ತು ದಾಲ್ಚಿನ್ನಿ ಎಲೆ ಸೇರಿಸಿ ಸಿಡಿಯಲು ಬಿಡಿ. ಲಘುವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಿ.
* ಅದಕ್ಕೆ ಮಟನ್ ಸೇರಿಸಿ ಬೆರೆಸಿಕೊಳ್ಳಿ.
* ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಫ್ರೈ ಮಾಡಿ.
* ಬಳಿಕ ಕಾಶ್ಮೀರಿ ಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಸೇರಿಸಿ ಮಟನ್ ಕಂದು ಬಣ್ಣ ಬರುವವರೆಗೆ ಸುಮಾರು 20 ನಿಮಿಷಗಳ ಕಾಲ ಹುರಿಯಿರಿ.
* ಬಳಿಕ ಮೊಸರು ಮತ್ತು ಉಪ್ಪನ್ನು ಬೆರೆಸಿ 2-3 ನಿಮಿಷಗಳ ಕಾಲ ಮುಚ್ಚಳವಿಲ್ಲದೆ ಬೇಯಿಸಿ.
* ಕತ್ತರಿಸಿದ ಬೆಳ್ಳುಳ್ಳಿ ಮತ್ತು ನೀರನ್ನು ಸೇರಿಸಿ, ನಂತರ ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಇನ್ನೂ 40-45 ನಿಮಿಷ ಬೇಯಿಸಿ.
* ಬಳಿಕ ಉರಿಯನ್ನು ಆಫ್ ಮಾಡಿ, ಮುಚ್ಚಳವನ್ನು ತೆಗೆಯದೇ ಸುಮಾರು 2 ಗಂಟೆ ಹಾಗೇ ವಿಶ್ರಾಂತಿ ನೀಡಿ.
* ಇದೀಗ ರಾಜಸ್ಥಾನಿ ಲಾಲ್ ಮಾಸ್ ಮಟನ್ ಕರಿ ತಯಾರಾಗಿದ್ದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಾಗಿ ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಅಮೃತಸರಿ ಕುಲ್ಚಾ ಹೀಗೆ ಮಾಡಿ