ಆರೋಗ್ಯಕರ ತರಕಾರಿಗಳ ಪಟ್ಟಿಯಲ್ಲಿ ಬೀಟ್ರೂಟ್ ಅಗ್ರ ಸ್ಥಾನದಲ್ಲಿ ಬರುತ್ತದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಬೀಟ್ರೂಟ್ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಕೂಡ. ನಾವಿಂದು ಹೇಳಿಕೊಡುತ್ತಿರುವ ರೆಸಿಪಿ ಬೀಟ್ರೂಟ್ ರಾಯಿತಾ (Beetroot Raita) ಡಯಟ್ ಮಾಡುವಂತಹವರಿಗೆ ಒಂದು ಪರ್ಫೆಕ್ಟ್ ಆಯ್ಕೆಯಾಗಿದೆ. ಫಟಾಫಟ್ ಅಂತ ಮಾಡಬಹುದಾದ ಆರೋಗ್ಯಕರ ಬೀಟ್ರೂಟ್ ರಾಯಿತಾ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ತುರಿದ ಬೀಟ್ರೂಟ್ – ಅರ್ಧ
ಮೊಸರು – 2 ಕಪ್
ಕಪ್ಪು ಉಪ್ಪು – ಅರ್ಧ ಟೀಸ್ಪೂನ್
ಚಾಟ್ ಮಸಾಲಾ – 1 ಟೀಸ್ಪೂನ್
ಹಾಲು – ಅರ್ಧ ಕಪ್
ಹುರಿದ ಜೀರಿಗೆ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಹುಳಿ, ಸಿಹಿ ಖಾರ ರುಚಿಯ ಅನನಾಸು ರಸಂ ಮಾಡಿ
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಬೌಲ್‌ನಲ್ಲಿ ಮೊಸರು ಮತ್ತು ಹಾಲು ಹಾಕಿ ಮೃದುವಾದ ಸ್ಥಿರತೆ ಬರುವಂತೆ ಚೆನ್ನಾಗಿ ಮಿಕ್ಸ್ ಮಾಡಿ.
* ಅದಕ್ಕೆ ತುರಿದ ಬೀಟ್ರೂಟ್, ಕೊತ್ತಂಬರಿ ಸೊಪ್ಪು, ಉಪ್ಪು, ಕಪ್ಪು ಉಪ್ಪು, ಹುರಿದ ಜೀರಿಗೆ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ.
* ಇದೀಗ ಬೀಟ್ರೂಟ್ ರಾಯಿತಾ ತಯಾರಾಗಿದ್ದು, ಅನ್ನದೊಂದಿಗೆ ಸವಿಯಿರಿ.
* ಡಯಟ್‌ನಲ್ಲಿರುವವರು ಇದನ್ನು ಹಾಗೆಯೂ ಸೆವಿಯಬಹುದು. ಇದನ್ನೂ ಓದಿ: ಸಖತ್ ಟೇಸ್ಟಿ ಕರಿಬೇವು ಸೊಪ್ಪಿನ ಚಟ್ನಿ ರೆಸಿಪಿ