ಈರುಳ್ಳಿ ಪರೋಟ ಭಾರತೀಯ ಫ್ಲಾಟ್‌ಬ್ರೆಡ್. ಮುಖ್ಯವಾಗಿ ಪಂಜಾಬ್‌ನಲ್ಲಿ ಅತ್ಯಂತ ಫೇಮಸ್ ಆಗಿರೋ ಪರೋಟಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಗೋಧಿಯಿಂದ ಮಾಡಲಾಗುವ ಪರೋಟವನ್ನು ಇನ್ನೂ ವಿವಿಧ ರೀತಿಯ ತರಕಾರಿಗಳನ್ನು ಬಳಸಿ ಮತ್ತಷ್ಟು ರುಚಿಕರವನ್ನಾಗಿ ಮಾಡಬಹುದು. ಆಲೂ ಪರೋಟಾ, ಮಸಾಲಾ ಪರೋಟಾ ನಾವು ಈ ಹಿಂದೆ ಮಾಡೋದು ಹೇಗೆಂದು ಹೇಳಿಕೊಟ್ಟಿದ್ದೇವೆ. ಇಂದು ನಾವು ಈರುಳ್ಳಿ ಪರೋಟ ರೆಸಿಪಿ ಹೇಳಿಕೊಡುತ್ತಿದ್ದೇವೆ. ಇದನ್ನು ಮನೆಯಲ್ಲಿ ಟ್ರೈ ಮಾಡಿ ಆನಂದಿಸಿ.
Advertisement
ಬೇಕಾಗುವ ಪದಾರ್ಥಗಳು:
ಹಿಟ್ಟು ತಯಾರಿಸಲು:
ಗೋಧಿ ಹಿಟ್ಟು – 2 ಕಪ್
ಉಪ್ಪು – ಅರ್ಧ ಟೀಸ್ಪೂನ್
ಎಣ್ಣೆ – 2 ಟೀಸ್ಪೂನ್
ನೀರು – ಅಗತ್ಯವಿರುವಂತೆ
ಈರುಳ್ಳಿ ಸ್ಟಫಿಂಗ್ ತಯಾರಿಸಲು:
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಗರಂ ಮಸಾಲೆ ಪುಡಿ – ಅಗತ್ಯವಿರುವಂತೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಪರೋಟ ಕಾಯಿಸಲು ಬೇಕಾಗುವಷ್ಟು ಇದನ್ನೂ ಓದಿ: ಬಾದಾಮಿ ಹಿಟ್ಟು ಬಳಸಿ ಮಾಡಿ ಟೇಸ್ಟಿ ಪ್ಯಾನ್ ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಗೋಧಿ ಹಿಟ್ಟು ಹಾಕಿ, 2 ಟೀಸ್ಪೂನ್ ಎಣ್ಣೆ, ಉಪ್ಪು ಹಾಗೂ ಚಪಾತಿ ಹಿಟ್ಟಿನ ಹದಕ್ಕೆ ತರಲು ಬೇಕಾಗುವಷ್ಟು ನೀರು ಸೇರಿಸಿ ಮೃದುವಾಗಿ ಬೆರೆಸಿಕೊಳ್ಳಿ.
* ಹಿಟ್ಟನ್ನು ಮುಚ್ಚಿ 20-30 ನಿಮಿಷ ಪಕ್ಕಕ್ಕಿಟ್ಟು ವಿಶ್ರಾಂತಿ ನೀಡಿ.
* ಈ ನಡುವೆ ನೀವು ಈರುಳ್ಳಿ ಸ್ಟಫಿಂಗ್ ತಯಾರಿಸಬೇಕು. ಅದಕ್ಕಾಗಿ ಇನ್ನೊಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಈರುಳ್ಳಿ ಹಾಗೂ ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
* ಈಗ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ತಯಾರಿಸಿ, ಸುಮಾರು 3-4 ಇಂಚಿನಷ್ಟು ವ್ಯಾಸ ಬರುವಂತೆ ಲಟ್ಟಣಿಗೆಯಿಂದ ಲಟ್ಟಿಸಿಕೊಳ್ಳಿ.
* ಅದರ ನಡುವೆ ಹೆಚ್ಚಿದ ಈರುಳ್ಳಿ ಹಾಗೂ ಮೆಣಸಿನಕಾಯಿ ಮಿಶ್ರಣವನ್ನು 1-2 ಟೀಸ್ಪೂನ್‌ನಷ್ಟು ಇಟ್ಟು, ಅದರ ಮೇಲೆ ಚಿಟಿಕೆ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪನ್ನು ಸಿಂಪಡಿಸಿ.
* ಈಗ ಹಿಟ್ಟಿನ ಅಂಚುಗಳನ್ನು ಜೋಡಿಸಿ, ಅದರ ಮಧ್ಯದಲ್ಲಿ ಒತ್ತಿ ಮತ್ತೆ ಚೆಂಡನ್ನಾಗಿ ಮಾಡಿ.
* ಈಗ ಸುಮಾರು 5-8 ಇಂಚು ವ್ಯಾಸಕ್ಕೆ ಬರುವಂತೆ ಲಟ್ಟಣಿಗೆ ಸಹಾಯದಿಂದ ಸುತ್ತಿಕೊಳ್ಳಿ.
* ಇಗ ತವಾವನ್ನು ಬಿಸಿ ಮಾಡಿ ಪರೋಟವನ್ನು ಅದರಲ್ಲಿಟ್ಟು ಎರಡೂ ಬದಿ ಸಮವಾಗಿ ಬೇಯಿಸಿಕೊಳ್ಳಿ. ಎರಡೂ ಬದಿ ಸ್ವಲ್ಪ ಎಣ್ಣೆಯನ್ನು ಹಚ್ಚಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ.
* ಇದೀಗ ಈರುಳ್ಳಿ ಪರೋಟ ತಯಾರಾಗಿದ್ದು, ಉಪ್ಪಿನಕಾಯಿ, ಮೊಸರು, ಅಥವಾ ಯಾವುದಾದರೂ ಗ್ರೇವಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಮಕ್ಕಳು ಇಷ್ಟಪಟ್ಟು ತಿನ್ನುವ ರೆಸಿಪಿ – ಕಾರ್ನ್ ಚೀಸ್ ಸ್ಯಾಂಡ್‌ವಿಚ್ ಮಾಡಿ