ಟಾಲಿವುಡ್ ಅಂಗಳದ ಸ್ಟಾರ್ ನಟ ಮಹೇಶ್ ಬಾಬು ಮತ್ತೆ ಸುದ್ದಿಯಲ್ಲಿದ್ದಾರೆ. `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದ ಮಹೇಶ್ ಬಾಬು ಈಗ ತಮ್ಮ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳು ಮೋಡಿ ಮಾಡಿರುವ ಪ್ರಿನ್ಸ್ ಮಹೇಶ್ ಬಾಬು ಸದ್ಯ `ಸರ್ಕಾರಿ ವಾರಿ ಪಾಟ’ ಚಿತ್ರದ ಸಕ್ಸಸ್ ಖುಷಿಯನ್ನ ಸವಿಯುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಜೊತೆಗೆ ವಿದೇಶದ ಟ್ರಿಪ್ ಮುಗಿಸಿ ಮತ್ತೆ ಹಿಂದಿರುಗಿದ್ದಾರೆ. ಸದ್ಯ ಮಹೇಶ್ ಬಾಬು ತಮ್ಮ ನಯಾ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ:ಗಂಟಲು ನೋವಿನ ಔಷಧಿ ವಿಚಾರಕ್ಕೆ ಸೋನು ಕಾಲೆಳೆದ ಕಿಚ್ಚ ಸುದೀಪ್
View this post on Instagram
ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋಶೂಟ್ ಶೇರ್ ಮಾಡಿ, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ. ಫೋಟೋದಲ್ಲಿ ಮತ್ತಷ್ಟು ಯಂಗ್ ಆಗಿ ಚಾರ್ಮಿಂಗ್ ಲುಕ್‌ನಲ್ಲಿ ಮಿಂಚಿದ್ದಾರೆ. ಮಹೇಶ್ ಬಾಬು ಅವರ ಲುಕ್ ನೋಡಿ ಫೀಮೇಲ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ನೆಚ್ಚಿನ ನಟ ಹೊಸ ಲುಕ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.