ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಜೊತೆ ಕಾಲ ಕಳೆದ ಮಹೇಶ್‌ ಬಾಬು ಪುತ್ರ

Public TV
2 Min Read
gautam

ತೆಲುಗಿನ ಸ್ಟಾರ್ ಹೀರೋ ಮಹೇಶ್ ಬಾಬು (Mahesh Babu) ಪುತ್ರ ಗೌತಮ್ (Gautam) ಇದೀಗ ಸುದ್ದಿಯಲ್ಲಿದ್ದಾರೆ. ಗೌತಮ್ ಶಾಲೆಗೆ ಮುಗಿದ ಮೇಲೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಮಗನ ಆಸ್ಪತ್ರೆಯ ಭೇಟಿಯ ಬಗ್ಗೆ ಅಸಲಿ ಕಾರಣ ಬಿಚ್ಚಿದ್ದಾರೆ. ಗೌತಮ್ ನಡೆಯ ಬಗ್ಗೆ ನಟಿ ನಮ್ರತಾ ಶಿರೋಡ್ಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಕಲಾ ಪ್ರತಿನಿಧಿಯಾಗಿ ಮೈಸೂರಿಗೆ ದೀಪ ಹಚ್ಚಲು ಬರುತ್ತೇನೆ: ಹಂಸಲೇಖ

mahesh babu

ನಟ ಮಹೇಶ್ ಬಾಬು ಅವರು ತಮ್ಮದೇ ಚಾರಿಟೇಬಲ್ ಫೌಂಡೇಶನ್ (MB Foundation)  ಹೊಂದಿದ್ದಾರೆ. ಎಂಬಿ ಫೌಂಡೇಶನ್ ಎಂಬುದು ಇದರ ಹೆಸರು. ಇದರ ಮೂಲಕ ಅನೇಕರಿಗೆ ನೆರವು ನೀಡುವ ಕೆಲಸ ಮಾಡ್ತಿದ್ದಾರೆ. ರೇನ್‌ಬೋ ಮಕ್ಕಳ ಆಸ್ಪತ್ರೆ ಜೊತೆಗೆ ಈ ಫೌಂಡೇಶನ್ ಕೈಜೋಡಿಸಿದೆ. ಹಾಗಾಗಿ ಗೌತಮ್ ಘಟ್ಟಮನೇನಿ ಅವರು ಈ ಆಸ್ಪತ್ರೆಗಳಿಗೆ (Hospital) ಭೇಟಿ ನೀಡುತ್ತಾರೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಜೊತೆಗೆ ಅವರು ಮಾತನಾಡುತ್ತಾರೆ. ಆ ಮೂಲಕ ಅವರ ಮುಖದಲ್ಲಿ ನಗು ಅರಳಿಸಲು ಪ್ರಯತ್ನಿಸುತ್ತಾರೆ. ಈ ಬಗ್ಗೆ ನಮ್ರತಾ ಶಿರೋಡ್ಕರ್ (Namrata Shirodkar) ಮಗನ (Son) ನಡೆ ಬಗ್ಗೆ ಶ್ಲಾಘಿಸಿದ್ದಾರೆ.

gautam 1

ಗೌತಮ್ ಎಂಬಿ ಫೌಂಡೇಶನ್‌ನ ಮುಖ್ಯ ಭಾಗ. ಶಾಲೆ ಮುಗಿದ ಬಳಿಕ ಅವನು ಆಸ್ಪತ್ರೆಗೆ ತೆರಳುತ್ತಾನೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಮುಖದಲ್ಲಿ ನಗು ಅರಳಿಸುವ ಸಲುವಾಗಿ ಅವರ ಜೊತೆ ಒಂದಷ್ಟು ಸಮಯ ಕಳೆಯುತ್ತಾನೆ. ಮಕ್ಕಳು ಆದಷ್ಟು ಬೇಗ ಚೇತರಿಸಿಕೊಳ್ಳಲು ಈ ರೀತಿಯಲ್ಲಿ ಸಹಾಯ ಮಾಡುತ್ತಿರುವ ಗೌತಮ್ ಸಾಥ್ ನೀಡುತ್ತಾರೆ. ಈ ಬಗ್ಗೆ ನಟಿ ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಒಟ್ನಲ್ಲಿ ಮಹೇಶ್ ಬಾಬು ಪುತ್ರ ನಡೆ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ (Sitara), ನಿರೂಪಣೆ- ಮಾಡೆಲಿಂಗ್ ಅಂತಾ ಒಂದಲ್ಲಾ ಒಂದು ವಿಚಾರವಾಗಿ ಗಮನ ಸೆಳೆಯುತ್ತಿದ್ದಾರೆ. ಗೌತಮ್ ಸದ್ಯ ಎಜುಕೇಶನ್ ಕಡೆ ಗಮನ ಕೊಡಲಿ ಬಳಿಕ ಚಿತ್ರರಂಗದಲ್ಲಿ ಬೆಳೆಯುವ ಆಸಕ್ತಿ ಇದ್ದರೆ ಬೆಳಯಲಿ ಎಂದು ನಮ್ರತಾ ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು.

Share This Article