ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಮಗೆ ಬರುವ ಆದಾಯದಲ್ಲಿ ಶೇ.15 ರಷ್ಟು ಹಣವನ್ನು ಸಮಾಜಸೇವೆಗೆ ಮೀಸಲಿಡುತ್ತಾರೆ. ಇದನ್ನು ಸ್ವತಃ ಅವರೇ ತಿಳಿಸಿದ್ದಾರೆ. ಈಗ ಅವರು ಪುಟ್ಟ ಮಕ್ಕಳ ಹೃದಯ ಚಿಕಿತ್ಸೆಗಾಗಿ ಫೌಂಡೇಶನ್ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ.
ಒಳ್ಳೆಯ ಕೆಲಸ ಮಾಡಿದಾಗ, ಸಹಾಯಹಸ್ತ ಚಾಚಿದಾಗ ಯಾವತ್ತೂ ಅವರು ಪ್ರಚಾರಕ್ಕಾಗಿ ಬಳಸಿಕೊಂಡಿಲ್ಲ. ಸದ್ದಿಲ್ಲದೇ ಸಹಾಯ ಮಾಡಿರುತ್ತಾರೆ. ಆದರೆ ಈಗ ತಾವು ಮಾಡಿದ ಕೆಲಸದ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಹೃದಯ ಖಾಯಿಲೆ ಇರುವ ಬಡ ಮಕ್ಕಳು ಉಪಯೋಗವಾಗಲಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ
ಈ ಹಿಂದೆ ಮಹೇಶ್ 1000ಕ್ಕೂ ಹೆಚ್ಚು ಮಕ್ಕಳಿಗೆ ಹಾರ್ಟ್ ಸರ್ಜರಿ ಮಾಡಿಸಲು ಸಹಾಯ ಮಾಡಿದ್ದರು. ಈಗ ಇದೇ ಕಾರ್ಯವನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು ಎಂಬ ಉದ್ದೇಶದಿಂದ ಮತ್ತೆ ಅವರು ಆ ಕೆಲಸವನ್ನು ಮುಂದುವರೆಸಿದ್ದಾರೆ. ತಮ್ಮದೇ ಫೌಂಡೇಶನ್ ಮೂಲಕ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ ಹೃದಯಸಂಬಂಧಿ ಸಮಸ್ಯೆ ಚಿಕ್ಕವರಲ್ಲಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಪೋಷಕರಿಗೆ ಚಿಕಿತ್ಸೆ ಕೊಡಿಸಲು ಶಕ್ತಿಯಿಲ್ಲದೆ ಎಷ್ಟೋ ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ ಇದನ್ನು ಸ್ವಲ್ಪಮಟ್ಟಿಗಾದರೂ ತಡೆಯಲೂ ಮಹೇಶ್ ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ‘ಪ್ಯೂರ್ ಲಿಟಲ್ ಹಾರ್ಟ್ ಫೌಂಡೇಶನ್ ಲಾಂಚ್’ ಆಗಿದ್ದು, ಮಹೇಶ್ ಬಾಬು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಫೌಂಡೇಶನ್ಗೆ ತಮ್ಮ ಫೌಂಡೇಶನ್ ಮೂಲಕ ಮಕ್ಕಳಿಗೆ ನೆರವಾಗಲಿದ್ದಾರಂತೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?