ಕಾಲಿವುಡ್ ಸೂಪರ್‌ಸ್ಟಾರ್ ಅಜಿತ್ ‘ವಲಿಮೈ’ ಯಶಸ್ವಿನ ನಂತರ ಮತ್ತೆ ಅದೇ ಟೀಮ್ ಜತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾ ಸೆಟ್ ಏರಿದೆ.
Advertisement
ಅಜಿತ್ ನಟನೆಯ ‘ವಲಿಮೈ’ ಸಿನಿಮಾ ಬಾಕ್ಸ್ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಜಿತ್ ಖಡಕ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೇ, ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಹಾಗೂ ಭಾವನಾತ್ಮಕ ಸಂದೇಶವಿದೆ ಎನ್ನುವ ಕಾರಣಕ್ಕಾಗಿ ಎಲ್ಲ ಕಡೆ ಪ್ರಶಂಸೆಯ ಮಾತುಗಳು ಕೇಳಿ ಬಂದವು. ಇದನ್ನೂ ಓದಿ: ಬೆಂಗಳೂರಿನ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿದೆ ಸಲ್ಲು ‘ಮದರ್‌ಹುಡ್’ ಪೇಂಟಿಂಗ್
Advertisement
Advertisement
ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ‘ವಲಿಮೈ’ ಸಿನಿಮಾ ನಿರ್ಮಾಪಕ ಮತ್ತು ನಿದೇಶಕ ಎಚ್.ವಿನೋತ್, ಅಜಿತ್ ಜೊತೆಗೇ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ಆ ಸಿನಿಮಾಗೆ ‘ವಲ್ಲಮೈ’ ಎಂದು ಹೆಸರಿಡುವ ಸಾಧ್ಯತೆ ಇದೆ. ಈ ಸಿನಿಮಾದ ಮುಹೂರ್ತ ಮಾರ್ಚ್ 10ರಂದು ಹೈದರಬಾದ್ನಲ್ಲಿ ನಡೆಯಲಿದ್ದು, ಅಂದೇ ಈ ಸಿನಿಮಾ ಟೈಟಲ್ ರಿವೀಲ್ ಕೂಡ ಆಗಲಿದೆ.
Advertisement
ಅಜಿತ್ ನಟನೆಯ ‘ವಲಿಮೈ’ನಲ್ಲಿ ಅವರ ನಟನೆ ಎಲ್ಲರಿಗೂ ಇಷ್ಟವಾಗಿದ್ದರೂ, ಅಭಿಮಾನಿಗಳು ಅಜಿತ್ ಸಿನಿಮಾದಲ್ಲಿ ತುಂಬಾ ದಪ್ಪ ಆಗಿರುವುದಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಅಜಿತ್ ಅವರಿಗೆ ಹೊಟ್ಟೆ ತುಂಬಾ ಬಂದಿದೆ ಎಂದು ಕಾಮೆಂಟ್ ಕೂಡ ಮಾಡಿದ್ದರು. ಈ ಹಿನ್ನೆಲೆ ಅಜಿತ್ ಸ್ವಲ್ಪ ಅಪ್ಸೆಟ್ ಆಗಿದ್ದು, ಪಾತ್ರಕ್ಕಾಗಿ ದೇಹ ದಂಡಿಸುವುದು ಕಲಾವಿದನ ಕೆಲಸ. ಮುಂದಿನ ಸಿನಿಮಾಗಳಲ್ಲಿ ನನ್ನ ಬಾಡಿ ನೋಡಿ ಎಂದು ಚಾಲೆಂಜ್ ಮಾಡಿದ್ದರು. ಈ ಬೆನ್ನಲ್ಲೇ ಅವರು ಈಗಾಗಲೇ 10 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ: ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಮೂವೀ ಲೋಕೆಶನ್!
ಸದ್ಯ ‘ಎಕೆ 61’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದ ಒಂದು ಹಂತದಲ್ಲಿ ಬರುವ ಪಾತ್ರಕ್ಕಾಗಿ ಅವರು 25 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ಈ ಸಿನಿಮಾಗೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದು, ಭಿನ್ನ ಪಾತ್ರದಲ್ಲಿ ಅಜಿತ್ ಅವರನ್ನು ನೋಡಬಹುದಾಗಿದೆ.