ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರೇ ಆಗಿದ್ದ ಲೆಜೆಂಡ್ ಎಂ.ಎಸ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖಚಿತಪಡಿಸಿದೆ.
ಗುಡ್ನ್ಯೂಸ್ ಏನಂದ್ರೆ, ಐಪಿಎಲ್ನಲ್ಲಿ ಇಷ್ಟು ವರ್ಷಗಳ ಕಾಲ ಪ್ಲೇಯರ್ ಆಗಿ ನಿವೃತ್ತಿಯಾದ ಮಹಿ ಅವರನ್ನು ಸಿಎಸ್ಕೆ ನೂತನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ.
OFFICIAL ANNOUNCEMENT 🦁💛
A once-in-a-lifetime player.
A new role. A bond that lasts forever 💛
Mahendra Singh Dhoni takes charge as the Team Mentor of Chennai Super Kings!
Through countless victories, challenging times, and memories that will stay in our hearts forever, MS has been at the heart of our journey from the very beginning.
From leading us to glory to guiding the next generation of Super Kings, Thala will always be a part of our identity. And Chennai will always be his home.
Read more : https://t.co/YKsoHYE51A
#WhistlePodu
— Chennai Super Kings (@ChennaiIPL) November 17, 2026
5 ಟ್ರೋಫಿ ತಂದುಕೊಟ್ಟ ದಾಖಲೆ
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್, 24 ಅರ್ಧಶತಕಗಳೂ ಸೇರಿವೆ.
A lovely tribute video by CSK for MS Dhoni. ❤️ https://t.co/zKYSPbyQC1
— Mufaddal Vohra (@mufaddal_vohra) November 17, 2026
2023ರಲ್ಲಿ ಸಿಎಸ್ಕೆ ಟ್ರೋಫಿ ಗೆದ್ದಾಗಲೇ, ಮಹಿ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಧೋನಿ ಇನ್ನೂ ಎರಡು ಸೀಸನ್ಗಳನ್ನ ಆಡುವುದಾಗಿ ಹೇಳಿದ್ದರು. 2026ರ ಆವೃತ್ತಿಯಲ್ಲಿ ಮಹಿ ತಂಡದಲ್ಲಿದ್ದರೂ, ಒಂದೇ ಒಂದು ಪಂದ್ಯವನ್ನೂ ಆಡದೇ ಹೊರಗುಳಿದರು. ಈ ಬಾರಿ ಟೂರ್ನಿ ಆರಂಭ ಆಗುವುದಕ್ಕೆ ಮುನ್ನವೇ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿಶೇಷವೆಂದ್ರೆ ಇಷ್ಟು ದಿನ ಆಟಗಾರನಾಗಿ ನೋಡುತ್ತಿದ್ದ ಸಿಎಸ್ಕೆ ಅಭಿಮಾನಿಗಳು ಇನ್ಮುಂದೆ ಧೋನಿ ಅವರನ್ನ ಕೋಚ್ ಆಗಿ ನೋಡುತ್ತಾರೆ.
ಧೋನಿ ನಮ್ಮ ತಂಡದ ಗುರುತು: ಎನ್. ಶ್ರೀನಿವಾಸನ್
ಧೋನಿ ನಿವೃತ್ತಿ ಬೆನ್ನಲ್ಲೇ ಸಿಎಸ್ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಮಹಿ ಅವರೊಂದಿಗಿನ ದೀರ್ಘಕಾಲದ ಬಾಂಧವ್ಯವನ್ನ ಸ್ಮರಿಸಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಎಂ.ಎಸ್. ಧೋನಿ ಇಲ್ಲದೆ ಸಿಎಸ್ಕೆ ಇಲ್ಲ. ಸುಮಾರು ಎರಡು ದಶಕಗಳಿಂದ ನಾವು ಪರಸ್ಪರ ಜೊತೆಯಾಗಿ ನಡೆದು, ಬೆಳೆದಿದ್ದೇವೆ. ಗೆಲುವುಗಳು, ಸೋಲುಗಳು ಮತ್ತು ಎಲ್ಲ ಏರಿಳಿತಗಳಲ್ಲೂ ನಮ್ಮ ಪ್ರಯಾಣ ಮುಂದುವರಿದಿದೆ. ನಮ್ಮ ಸಂಬಂಧ ಇಷ್ಟೊಂದು ಗಟ್ಟಿಯಾಗಿರಲು ಒಂದೇ ಕಾರಣವಿದೆ. ನಾವು ಪರಸ್ಪರರ ಉದ್ದೇಶಗಳನ್ನು ಎಂದಿಗೂ ಪ್ರಶ್ನಿಸುವುದಿಲ್ಲ. ಆ ನಂಬಿಕೆಯೇ ಈ ಅದ್ಭುತ ಪ್ರಯಾಣವನ್ನು ಸಾಧ್ಯವಾಗಿಸಿದೆ. 2008ರಲ್ಲಿ ಧೋನಿ ಸಿಎಸ್ಕೆ ತಂಡದ ಭಾಗವಾಗಿರಬೇಕು ಎಂದು ನಾನು ಪಟ್ಟು ಹಿಡಿದಿದ್ದೆ. ಅದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂಬುದು ಈಗ ಸಾಬೀತಾಗಿದೆ. ಫ್ರಾಂಚೈಸಿಗಾಗಿ ಅವರು ಮಾಡಿದ ಸಾಧನೆಗಳಷ್ಟೇ ಅಲ್ಲ, ಅವರು ಎಂತಹ ವ್ಯಕ್ತಿ ಎಂಬುದೂ ಇದಕ್ಕೆ ಕಾರಣ. ಧೋನಿ ಎಂದೆಂದಿಗೂ ನಮ್ಮ ಗುರುತಿನ ಭಾಗವಾಗಿರುತ್ತಾರೆ. ಸಿಎಸ್ಕೆ ಯಾವಾಗಲೂ ಅವರ ಮನೆಯೇ ಆಗಿರುತ್ತದೆ ಎಂದು ಶ್ರೀನಿವಾಸನ್ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

