ಇಂದು ಮಹಾ ಶಿವರಾತ್ರಿ (Mahashivratri). ಮಹಾದೇವನ ಆರಾಧಿಸುವ ಪುಣ್ಯದಿನ. ಶಿವನೊಲಿದರೆ ಭಯವಿಲ್ಲ ಎನ್ನುವಂತೆ ಅವನನ್ನು ಒಲಿಸಿಕೊಳ್ಳಲು ಸ್ಯಾಂಡಲ್‌ವುಡ್ ಕೂಡ ಹಿಂದೆ ಬಿದ್ದಿಲ್ಲ. ಪರಶಿವನ ಮಹಿಮೆಯನ್ನು ಸಾರುವಂತಹ ಅನೇಕ ಚಿತ್ರಗಳನ್ನು ಮಾಡುವ ಮೂಲಕ ತೆರೆಯ ಮೇಲೂ ಶಿವನ ಅವತಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
ಪೌರಾಣಿಕ ಚಿತ್ರಗಳಲ್ಲಿ ಶಿವನಿಲ್ಲದೇ ಚಿತ್ರಗಳೇ ಇಲ್ಲ ಎನ್ನುವಷ್ಟು ಶಿವ ದರ್ಶನ ಮಾಡಿದ್ದಾನೆ. ಕೆಲ ನಟರಂತೂ ಈಗಲೂ ಶಿವನಾಗಿಯೇ ಅಭಿಮಾನಿಗಳು ಹೃದಯದಲ್ಲಿ ಉಳಿದಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಹಲವು ಭಾಷೆಗಳಲ್ಲಿ ಮತ್ತು ಕಿರುತೆರೆಗಳಲ್ಲೂ ಶಿವನಾಮ ಸ್ಮರಣೆ ಮಾಡುವಂತಹ ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳು ತೆರೆ ಕಂಡಿವೆ. ಮಹಾ ಶಿವರಾತ್ರಿ ದಿನದಂದು ಆ ಚಿತ್ರಗಳ, ಪಾತ್ರಗಳ ಒಂದು ನೋಟ ಹೀಗಿದೆ. ಇದನ್ನೂ ಓದಿ: ಶಿವರಾತ್ರಿ ಸ್ಪೆಷಲ್ ತಂಬಿಟ್ಟು ರೆಸಿಪಿ
Advertisement
Advertisement
ಪೌರಾಣಿಕ ಸಿನಿಮಾಗಳನ್ನು ಮಾಡುವಾಗ, ಅದರಲ್ಲೂ ವಿಶೇಷವಾಗಿ ಪುರಾಣ ಪ್ರಸಂಗಗಳನ್ನು ಆಧರಿಸಿ ಚಿತ್ರಗಳನ್ನು ಮಾಡುವಾಗ ಅಲ್ಲಿ ಶಿವನಿರಲೇಬೇಕು. ಹಾಗಾಗಿ ಕೈಲಾಸ ವಾಸ ಶಿವನಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಬೇಡರ ಕಣ್ಣಪ್ಪ ಸಿನಿಮಾದಿಂದ ಶಿವನಿಗೆ ಮತ್ತಷ್ಟು ಬೇಡಿಕೆಯೂ ಹೆಚ್ಚಾಗಿದೆ.
Advertisement
ಭೂ ಕೈಲಾಸ, ಭಕ್ತ ಸಿರಿಯಾಳ (Bhakta Siriyala), ಗಿರಿಜಾ ಕಲ್ಯಾಣ, ಗಂಗೆ ಗೌರಿ, ಭಕ್ತ ಮಾರ್ಕಂಡೇಯ, ಸ್ವರ್ಣಗೌರಿ, ಶಿವ ಕೊಟ್ಟ ಸೌಭಾಗ್ಯ, ಭಕ್ತ ಮಲ್ಲಿಕಾರ್ಜುನ, ಶ್ರೀ ಮಂಜುನಾಥ, ಶಿವ ಮೆಚ್ಚಿದ ಕಣ್ಣಪ್ಪ, ಪಾರ್ವತಿ ಕಲ್ಯಾಣ ಹೀಗೆ ಶಿವನ ಕುರಿತಾಗಿ ಸಾಮಾಜಿಕ, ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳು ತೆರೆ ಕಂಡಿವೆ. ಪಿ.ಆರ್. ಕೌಂಡಿನ್ಯ ನಿರ್ದೇಶನದಲ್ಲಿ ಮೂಡಿ ಬಂದ ಶಿವರಾತ್ರಿ ಮಹಾತ್ಮೆಯಂತೂ ಶಿವನ ನಾನಾ ಅವತಾರಗಳನ್ನು ತೋರಿಸುವ ಮೂಲಕ ಜನಪ್ರಿಯತೆ ಪಡೆಯಿತು. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?
Advertisement
ಬೇಡರ ಕಣ್ಣಪ್ಪ (Bedara Kannappa)
ಶಿವರಾತ್ರಿ ಹಬ್ಬ ಅಂದಾಕ್ಷಣ ಥಟ್ಟನೆ ನೆನಪಾಗುವ ಗೀತೆ ‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ’ ಈ ಗೀತೆಯು ಶಿವಭಕ್ತರ ಪಾಲಿನ ಅತ್ಯಂತ ಜನಪ್ರಿಯ ಸಿನಿಮಾ ಬೇಡರ ಕಣ್ಣಪ್ಪ ಚಿತ್ರದ್ದು. 1954ರಲ್ಲಿ ತೆರೆಕಂಡ ಬೇಡರ ಕಣ್ಣಪ್ಪ ಚಿತ್ರದಲ್ಲಿ ಬೇಡ ಭಕ್ತನೊಬ್ಬ ತನ್ನ ಆರಾಧ್ಯ ದೈವ ಶಿವನಿಗೆ ತೊಂದರೆ ಆಗಿದೆಯಂತೆ ತನ್ನೆರಡು ಕಣ್ಣುಗಳನ್ನು ಅರ್ಪಿಸುವ ಕಥೆಯಿದೆ. ಬೇಡರ ಕಣ್ಣಪ್ಪನಾಗಿ ಡಾ.ರಾಜ್ ಕುಮಾರ್ ಅಮೋಘವಾಗಿ ನಟಿಸಿದ್ದಾರೆ.
ಭಕ್ತಿ ಸಿರಿಯಾಳ
ಹರಿಕಥೆ, ತತ್ವಪದಗಳನ್ನೇ ಆಧಾರವಾಗಿಟ್ಟುಕೊಂಡು ಭಕ್ತ ಸಿರಿಯಾಳ ಕಥೆ ಹೇಳಿದ್ದಾರೆ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. 1980ರಲ್ಲಿ ಬಿಡುಗಡೆಯಾದ ಭಕ್ತ ಪ್ರಧಾನ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ. ಲೋಕೇಶ್ ಮತ್ತು ಆರತಿ ಅಭಿನಯವನ್ನು ನೋಡಲೇಬೇಕು. ಭಕ್ತಿ ಭಾವದಿಂದ ಈ ಜೋಡಿ ನಟಿಸಿದೆ. ಟಿ.ಟಿ. ಲಿಂಗಪ್ಪ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಸೂಪರ್. ಇದನ್ನೂ ಓದಿ: Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?
ಭಕ್ತ ಮಾರ್ಕಂಡೇಯ
ಮಕ್ಕಳು ಮತ್ತು ಹಿರಿಯರಿಗೆ ಏಕಕಾಲಕ್ಕೆ ಇಷ್ಟವಾಗುವ ಸಿನಿಮಾ ಭಕ್ತ ಮಾರ್ಕಂಡೇಯ. ಮುಗ್ದ ಮಗುವೊಂದು ಸಾವನ್ನು ಜಯಿಸುವ ರೋಚಕ ಮತ್ತು ಭಕ್ತಿ ತುಂಬಿಕ ಕಥೆ ಈ ಸಿನಿಮಾದಲ್ಲಿದೆ. ಮಾರ್ಕಂಡಯ್ಯ ಸಾವನ್ನು ಹೇಗೆ ಗೆಲ್ಲುತ್ತಾನೆ ಎನ್ನುವುದನ್ನು ನೀವು ಸಿನಿಮಾದಲ್ಲಿಯೇ ನೊಡಬೇಕು. ಅದರಲ್ಲೂ ಅದ್ಭುತವಾದ ಭಕ್ತಿ ಗೀತೆಗಳು ಈ ಚಿತ್ರದಲ್ಲಿವೆ. ಇದು 1956ರಲ್ಲಿ ನಿರ್ಮಾಣಗೊಂಡ ಚಿತ್ರ.
ಶ್ರೀಮಂಜುನಾಥ (Sri Manjunatha)
ಅರ್ಜುನ್ ಸರ್ಜಾ ಮತ್ತು ಹಂಸಲೇಖ ಕಾಂಬಿನೇಷನ್‌ನಲ್ಲಿ ಸಕ್ಸಸ್ ಆದ ಚಿತ್ರ ಶ್ರೀ ಮಂಜುನಾಥ್. ಈ ಸಿನಿಮಾದ ಹೈಲೈಟ್ ಅಂದರೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ. ಶಿವನ ಲೀಲೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನೀವು ಈ ಚಿತ್ರವನ್ನು ನೋಡಲೇಬೇಕು. ಅದರಲ್ಲೂ ಸೌಂದರ್ಯ ಮತ್ತು ಅರ್ಜುನ್ ಸರ್ಜಾ ಜೋಡಿಯು ತೆರೆಯ ಮೇಲೆ ಶಿವ ದರ್ಶನ ಮಾಡಿಸುತ್ತದೆ. ಅಂಬರೀಶ್, ಸುಮಲತಾ ಸೇರಿದಂತೆ ಹಲವಾರು ಹೆಸರಾಂತ ನಟರೇ ಈ ಸಿನಿಮಾದಲ್ಲಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ಹಬ್ಬ ಸೇರಿ 3 ದಿನ ರಜೆ- ಊರಿಗೆ ಹೊರಟ ಜನ, ಭಾರೀ ಟ್ರಾಫಿಕ್
ಇವರು ಶಿವನ ಪಾತ್ರಧಾರಿಗಳು:
1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರ ಶಾಸ್ತ್ರಿಗಳು ಶಿವನ ಪಾತ್ರ ಮಾಡಿದ್ದರು. ನಂತರ 1967ರಲ್ಲಿ ತೆರೆಕಂಡ ಪಾರ್ವತಿ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಶಿವನಾಗಿ ಭಕ್ತರನ್ನು ಆವರಿಸಿಕೊಂಡ ರೀತಿ ಬಣ್ಣಿಸಲೆಸದಳ.
1973ರಲ್ಲಿ ಬಿಡುಗಡೆಯಾದ ದೂರದ ಬೆಟ್ಟ ಚಿತ್ರದಲ್ಲಿ ಉದಯ ಶಂಕರ್, 1981ರಲ್ಲಿ ರಿಲೀಸ್ ಆದ ಗುರು ಶಿಷ್ಯರು ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, 1983ರಲ್ಲಿ ತೆರೆಗೆ ಬಂದ ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ಅಶೋಕ್, 1988ರಲ್ಲಿ ಬಿಡುಗಡೆಯಾದ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್, ಶಬರಿ ಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ ಹಾಗೂ ಬಾಲ ಶಿವ ಚಿತ್ರದಲ್ಲಿ ಶ್ರೀಧರ್, ಪ್ರಚಂಡ ಕುಳ್ಳ ಚಿತ್ರದಲ್ಲಿ ವಿಷ್ಣುವರ್ಧನ್, ಶ್ರೀಮಂಜುನಾಥ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ಶಿವನೇ ಆಗಿದ್ದಾರೆ.