ಮಹಾಲಕ್ಷ್ಮಿ ನನಗೆ ದೇವರು ಕೊಟ್ಟ ಗಿಫ್ಟ್ : ಪತಿ ರವೀಂದರ್ ಮೊದಲ ಪ್ರತಿಕ್ರಿಯೆ

Advertisements

ಮೂರು ದಿನಗಳ ಹಿಂದೆಯಷ್ಟೇ ಮದುವೆ ಆಗಿ ಅಚ್ಚರಿ ಮೂಡಿಸಿರುವ ನಟಿ ಮಹಾಲಕ್ಷ್ಮೀ ಮತ್ತು ನಿರ್ಮಾಪಕ ರವೀಂದರ್, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದರು. ಮಹಾಲಕ್ಷ್ಮಿ ಅವರು ತಮ್ಮ ಮದುವೆ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಸಾಕಷ್ಟು ಜನರು ಈ ಜೋಡಿಯ ಬಗ್ಗೆ ಆಡಿಕೊಂಡಿದ್ದರು. ಆದರೆ, ಮಹಾಲಕ್ಷ್ಮಿ ಮಾತ್ರ ತಮ್ಮ ಪ್ರೀತಿಯನ್ನು ಪತಿಗೆ ತೋರಿದ್ದರು. ಹೃದಯ ಕದ್ದಿದ್ದೀಯಾ ಜೋಪಾನವಾಗಿ ನೋಡಿಕೊಳ್ಳಿ ಎಂದು ನಿವೇದನೆ ಮಾಡಿದ್ದರು. ಇದೀಗ ತಮ್ಮ ಮದುವೆಯ ಬಗ್ಗೆ ರವೀಂದರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಮಹಾಲಕ್ಷ್ಮಿಯನ್ನು ಮದುವೆ ಆಗಿರುವ ಕುರಿತು ನಿರ್ಮಾಪಕ ರವೀಂದರ್ ಮೊದಲ ಪ್ರತಿಕ್ರಿಯೆ ನೀಡಿದ್ದರು, ‘ನೀನು ನನಗೆ ದೇವರು ಕೊಟ್ಟಿರುವ ಗಿಫ್ಟ್. ನನ್ನೆಲ್ಲ ಸಂಕಟಗಳನ್ನು ದಾಟಿಕೊಳ್ಳಲು ಖುದ್ದಾಗಿ ಆ ಪರಮಾತ್ಮನೇ ನಿನ್ನನ್ನು ಕಳುಹಿಸಿದ್ದಾನೆ’ ಎಂದು ಬರೆದಿಕೊಂಡಿದ್ದಾರೆ. ಮನಮೆಚ್ಚಿದ ಹುಡುಗಿಯನ್ನು ಹಾಡಿಹೊಗಳಿದ್ದಾರೆ. ತಮ್ಮ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಹಾರೈಸಿ ಎಂದು ಅಭಿಮಾನಿಗಳನ್ನು ಅವರು ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ನಟ ಧನಂಜಯ್ ಮತ್ತು ಅದಿತಿ ಪ್ರಭುದೇವ್ ರಿಯಲ್ ಆಗಿ ಮದುವೆ ಆಗ್ಬೇಕಿತ್ತು: ಆದರೆ ತಪ್ಪಿಸಿದವರು ಯಾರು?

Advertisements

ಈ ಜೋಡಿಯ ಲವ್ ಕಹಾನಿ ಶುರುವಾಗಿದ್ದೇ ಒಂದು ಇಂಟ್ರಸ್ಟಿಂಗ್ ಸ್ಟೋರಿ. ಮಹಾಲಕ್ಷ್ಮಿ ಕೇವಲ ನಿರೂಪಕಿ ಮಾತ್ರವಲ್ಲ, ಕಿರುತೆರೆ ನಟಿ ಕೂಡ. ರವೀಂದರ್ ಕೂಡ ಕಿರುತೆರೆಯ ಲೋಕದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೊದಲ ಪ್ರೇಮ ಶುರುವಾಗಿದ್ದೇ ಈ ಧಾರಾವಾಹಿಯ ಮೂಲಕ. ಮೊದಲು ನಟಿಯಾಗಿ ಪರಿಚಯ. ಆಮೇಲೆ ಸ್ನೇಹ. ಸ್ನೇಹ ವಿಶ್ವಾಸವಾಗಿ, ಅದು ಸಂದೇಶವಾಗಿ ಹರಿದು ಬಂದು ಇಬ್ಬರನ್ನೂ ಒಂದಾಗಿಸಿದೆ.

Advertisements

ಅದೊಂದು ರಾತ್ರಿ ಮಹಾಲಕ್ಷ್ಮಿ ಮೊಬೈಲ್ ಗೆ ಬಂದ ಸಂದೇಶ ಸ್ವತಃ ಅವರನ್ನೇ ಅಚ್ಚರಿಗೆ ನೂಕಿದೆ. ಆ ಕಡೆಯಿಂದ ಸಂದೇಶ ಕಳುಹಿಸಿದ್ದು ರವೀಂದರ್. ನೀವು ನನಗೆ ಇಷ್ಟವಾಗಿದ್ದೀರಿ. ಮದುವೆ ಯಾಕೆ ಆಗಬಾರದು ಎನ್ನುವ ರವೀಂದರ್ ಕೋರಿಕೆಯನ್ನು ಕೆಲವು ದಿನಗಳ ನಂತರ ಮಹಾಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ಪ್ರೇಮಕಾವ್ಯ ಇಂದು ದಾಂಪತ್ಯಗೀತೆಯಾಗಿ ಅವರ ಮುಂದಿದೆ. ಮಹಾಲಕ್ಷ್ಮಿ ಮತ್ತು ರವೀಂದರ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Live Tv

Advertisements
Exit mobile version