– ಶಿವನಿಗೆ ವಿಶೇಷ ಅಲಂಕಾರ, 60,000 ಜನಕ್ಕೆ ಅನ್ನಪ್ರಸಾದ ವಿತರಣೆ
– ಮುಂಜಾನೆಯಿಂದಲೇ ದರ್ಶನಕ್ಕೆ ಭಕ್ತರ ದಂಡು
ಬೆಂಗಳೂರು: ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯದಲ್ಲಿ (Kadu Malleshwara Swamy Temple) ಶಿವರಾತ್ರಿ ಹಬ್ಬದ (Maha Shivratri Festival) ಸಂಭ್ರಮ ಜೋರಾಗಿದೆ. ನಸುಕಿನ ಜಾವ 4 ಗಂಟೆಯಿಂದಲೇ ರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆರಂಭವಾಗಿದೆ.
Advertisement
ಶಿವನಿಗೆ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರಲಿದೆ. ದೇವಾಲಯದಲ್ಲಿ ವಿಶೇಷ ಅಲಂಕಾರವನ್ನ ಮಾಡಲಾಗಿದ್ದು, 2,000 ಮುಸುಕಿನ ಜೋಳ ಇಪ್ಪತ್ತುವರೆ ಕಬ್ಬು ಹಾಗೂ 1,500 ಎಳನೀರಿನಿಂದ ಅಲಂಕಾರ ಮಾಡಲಾಗಿದೆ. ಇದನ್ನೂ ಓದಿ: ಮಹಾ ಶಿವರಾತ್ರಿ: ಆಡಂಬರವಿಲ್ಲ, ಅಲಂಕಾರ ಪ್ರಿಯನಲ್ಲ.. ಭಕ್ತಿಯಿಂದ ಭಜಿಸಿ ಶಿವನ
Advertisement
Advertisement
ಬೆಳಗ್ಗೆ 5.30ರ ವರೆಗೆ ಸೇವಾ ಚೀಟಿ ಪಡೆದಿರುವ 1,500 ಜನ ಕುಟುಂಬ ಸಮೇತರಾಗಿ ಭಾಗಿಯಾಗಿದ್ದು, ಬೆಳಗ್ಗೆ 5.30ರ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಲಾಗಿದೆ. ಇದನ್ನೂ ಓದಿ: ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?
Advertisement
60,000 ಜನಕ್ಕೆ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.30 ರಿಂದ ಬೆಳಗಿನ ಜಾವ 2.30ರ ವರೆಗೆ ಜಾಗರಣೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!