ಚೆನ್ನೈ: ಆಡಳಿತಾರೂಢ ಡಿಎಂಕೆ ಪಕ್ಷದಿಂದ ನನಗೆ ಕಿರುಕುಳವಾಗುತ್ತಿದೆ. ನನಗೆ ಜೀವ ಬೆದರಿಕೆಯೂ ಇದೆ ಎಂದು ಮಧುರೈ ಅಧೀನಂ ಧರ್ಮದರ್ಶಿ ಜ್ಞಾನಸಂಬಂಧ ದೇಸಿಗರ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಮಧುರೈ ಜಿಲ್ಲಾಧಿಕಾರಿ ನಿನ್ನೆ ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವ ಆಚರಣೆಗೆ ಅನುಮತಿ ನಿರಾಕರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 500 ವರ್ಷಗಳ ಹಿಂದಿನ ಈ ಧಾರ್ಮಿಕ ಆಚರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು ನೋವಾಗಿದೆ. ಈ ಆಚರಣೆಯನ್ನು ಮಾಡಲೇಬೇಕು. ಇದಕ್ಕಾಗಿ ನಾನು ಪ್ರಾಣ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಅಂತಹ ಆಚರಣೆಯನ್ನು ನಿಷೇಧಿಸುವ ಹಕ್ಕು ಯಾವುದೇ ಸರ್ಕಾರ ಅಥವಾ ಸಂಸ್ಥೆಗೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಕೊಲೆಯ ಸಾಕ್ಷ್ಯಾಧಾರಗಳನ್ನು ಕದ್ದ ಕೋತಿ!
Advertisement
ಸ್ವಾಮೀಜಿ ತಮ್ಮ ಜೀವಕ್ಕೆ ಅಪಾಯವಿದೆ ಮತ್ತು ಆಡಳಿತಾರೂಢ ಡಿಎಂಕೆ ಪಕ್ಷವು ತನಗೆ ಕಿರುಕುಳ ನೀಡುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ
Advertisement
Advertisement
ಆಡಳಿತ ಪಕ್ಷದವರು ಗುತ್ತಿಗೆ ಪಡೆದಿರುವ ಜಮೀನಿಗೆ ಬಾಡಿಗೆ ನೀಡುತ್ತಿಲ್ಲ, ಜಮೀನನ್ನೂ ಹಿಂದಿರುಗಿಸುತ್ತಿಲ್ಲ. ನಾನು ಬಾಡಿಗೆ ಕೇಳಿದರೆ, ಅವರು ನನಗೆ ಬೆದರಿಕೆ ಹಾಕುತ್ತಾರೆ. ವಿಧಾನಸಭೆಯಲ್ಲಿ ಮಾತ್ರ ದೇವಸ್ಥಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎಂದೂ ಆರೋಪಿಸುತ್ತಾರೆ. ಜಾತ್ಯಾತೀತ ಎಂದು ಕರೆಯುವ ಸರ್ಕಾರ ಒಂದು ಧರ್ಮವನ್ನು ದುರ್ಬಲಗೊಳಿಸುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರಿಗೇ ಹೇಳುತ್ತೇನೆ ಎಂದಿದ್ದಾರೆ.