ಭೋಪಾಲ್: ಮಹತ್ವದ ಬೆಳವಣಿಗೆಯಲ್ಲಿ ಜ್ಞಾನವ್ಯಾಪಿ ಮಾದರಿಯಲ್ಲಿಯೇ ಮತ್ತೊಂದು ಐತಿಹಾಸಿಕ ಸ್ಥಳದ ಪುರಾತತ್ವ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಆದೇಶ ನೀಡಿದೆ. ಧರ್‌ನಲ್ಲಿರುವ (Dhar) ವಿವಾದಾತ್ಮಕ ಭೋಜಶಾಲಾ (Bhojshala) ಕಮಲ್ ಮೌಲಾ ಮಸೀದಿಯಲ್ಲಿ (Kamal Maula Mosque) ಎಎಸ್‌ಐ ಸರ್ವೇಗೆ (ASI Survey) ಹೈಕೋರ್ಟ್ ಅನುಮತಿ ನೀಡಿದೆ.
ವಾಗ್ದಾವಿ (Goddess Vagdevi) ಮಾತೆ ನೆಲೆಸಿರುವ ಭೋಜಶಾಲಾ ಮಂದಿರವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಎಸ್‌ಐ ಸಮೀಕ್ಷೆ ನಡೆಸುವಂತೆ ಕೋರಿ ವಕೀಲ ವಿಷ್ಣುಶಂಕರ್ ಜೈನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಮಿಷನ್ ದಿವ್ಯಾಸ್ತ್ರ ಪ್ರಯೋಗ ಯಶಸ್ವಿ – ಏನಿದು MIRV ತಂತ್ರಜ್ಞಾನ? ಯುದ್ಧದ ವೇಳೆ ಹೇಗೆ ಸಹಾಯವಾಗುತ್ತೆ? ಯಾರ ಬಳಿಯಿದೆ?
Advertisement
#WATCH | Noida, UP | On the MP High Court's verdict that allows ASI survey at Bhojshala temple, Advocate Vishnu Shankar Jain says, "…Today, the High Court has ordered for the ASI survey. The court has said to form a five-member committee of ASI members to be headed by the… pic.twitter.com/NDj0g2pZU8
— ANI (@ANI) March 11, 2024
Advertisement
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಮೀಕ್ಷೆಗೆ ಐವರು ತಜ್ಞರ ಸಮಿತಿ ರಚಿಸಿದೆ. ಮುಂದಿನ ಆರು ವಾರಗಳಲ್ಲಿ ಸಮೀಕ್ಷಾ ವರದಿ ಸಲ್ಲಿಸಲು ಸೂಚಿಸಿದೆ. ಇದನ್ನೂ ಓದಿ: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ – ಕೇಂದ್ರದಿಂದ ಅಧಿಸೂಚನೆ ಪ್ರಕಟ
Advertisement
ಇದು ಪುರಾತತ್ವ ಇಲಾಖೆ ಸಂರಕ್ಷಿತ ಸ್ಮಾರಕವಾಗಿರುವ ಕಾರಣ ಈ ಮಸೀದಿ, ಮಂದಿರಕ್ಕೆ 1991 ಪೂಜಾ ಸ್ಥಳಗಳ ಕಾಯ್ದೆ ಅನ್ವಯ ಆಗುವುದಿಲ್ಲ ಎಂದು ಹೇಳಲಾಗ್ತಿದೆ. ಮಂದಿರ-ಮಸೀದಿ ವಿವಾದ ಕಾರಣ ಈ ಹಿಂದೆ ಹಲವು ಬಾರಿ ಧರ್‌ನಲ್ಲಿ ಉದ್ವಿಗ್ನ ಪರಿಸ್ಥಿತಿಗಳು ನಿರ್ಮಾಣವಾಗಿದ್ದವು. ಬಸಂತ್ ಪಂಚಮಿ ದಿನವಾದ ಶುಕ್ರವಾರದಂದು ನಮಾಜ್‌ಗೆ ಮುಸ್ಲಿಮರು, ವಾಗ್ದೇವಿ ಪೂಜೆಗಾಗಿ ಹಿಂದೂಗಳು ಸಾಲುಗಟ್ಟಿದ್ದರು.
Advertisement