ಭೋಪಾಲ್: ಯುವತಿಯೊಬ್ಬಳು ದೇವಸ್ಥಾನವೊಂದರ (Temple) ಆವರದಲ್ಲಿ ಐಟಮ್ ಸಾಂಗ್‍ವೊಂದಕ್ಕೆ ಡ್ಯಾನ್ಸ್ (Dance) ಮಾಡಿದ ಘಟನೆ ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ನೇಹಾ ಎಂಬಾಕೆ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಡ್ಯಾನ್ಸ್ ಮಾಡಿದ್ದಳು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬಜರಂಗದಳದ ಕೆಲವು ಕಾರ್ಯಕರ್ತರು ವಿರೋಧವನ್ನು ವ್ಯಕ್ತಪಡಿಸಿದ್ದರು. ಜೊತೆಗೆ ದೇವಸ್ಥಾನದೊಳಗೆ ಈ ರೀತಿಯ ರೀಲ್ಸ್ ಮಾಡಿ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾಳೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ
Advertisement
View this post on Instagram
Advertisement
ಈ ಹಿನ್ನೆಲೆಯಲ್ಲಿ ಆ ವೀಡಿಯೋವನ್ನು ಡಿಲೀಟ್ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಳು. ಇನ್‍ಸ್ಟಾಗ್ರಾಮ್‍ನಲ್ಲಿ ನೇಹಾಳಿಗೆ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಘಟನೆಗೆ ಸಂಬಂಧಿಸಿ ನೇಹಾ ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ. ಇದನ್ನೂ ಓದಿ: ದಸರಾ ಪೆಂಡಾಲ್ ಸೌಂಡ್ ಸಿಸ್ಟಮ್ ವಯರ್ ಕಿತ್ತು ದರ್ಪ ಮೆರೆದ KAS ಅಧಿಕಾರಿ