ಧಾರವಾಡ: ಕೆಎಎಸ್ ಅಧಿಕಾರಿಯೊಬ್ಬರು (KAS Officer) ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ (Sound System) ವಯರ್ ಕಿತ್ತು ಹಾಕಿದ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ನಗರದ ರಾಜ್ ನಗರದಲ್ಲಿ ದುರ್ಗಾ ದೇವಿ ಉತ್ಸವದ ಹಿನ್ನೆಲೆ ಪೆಂಡಾಲ್ ಹಾಕಲಾಗಿತ್ತು. ಈ ವೇಳೆ ಸೌಂಡ್ ಸಿಸ್ಟಂ ಹಚ್ಚಿದ್ದಕ್ಕೆ ಅಬಕಾರಿ ಇಲಾಖೆಯ ಪ್ರೊಬೆಷನರಿ ಡಿಸಿಯಾದ ಶಾರದಾ ಕೊಳಕರ್ ಅವರು ಅಡ್ಡಿಪಡಿಸಿದ್ದಾರೆ.
Advertisement
Advertisement
ಶಾರದಾ ಕೊಳಕರ್ ಕೂಡಾ ರಾಜನಗರದಲ್ಲೇ ವಾಸವಾಗಿದ್ದು, ಬಡಾವಣೆಯಲ್ಲಿ ಹಾಕಲಾಗಿದ್ದ ಪೆಂಡಾಲ್‌ನಲ್ಲಿ ಸೌಂಡ್ ಸಿಸ್ಟಮ್ ಹಚ್ಚಿದ್ದ ವಯರ್ ಕಿತ್ತು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ದಸರಾಕ್ಕೆಂದು ಊರಿಗೆ ಬರುತ್ತಿದ್ದಾಗ ಬೈಕ್ ಅಪಘಾತ- ಇಬ್ಬರು ಸ್ಥಳದಲ್ಲೇ ಸಾವು
Advertisement
ವಯರ್ ಕಿತ್ತು ಹಾಕುವ ಸಮಯದಲ್ಲಿ ಅಲ್ಲೇ ಇದ್ದ ಕೆಲವರು ವೀಡಿಯೋ ಕೂಡಾ ಮಾಡಿದ್ದಾರೆ. ಕೇಬಲ್ ಕಿತ್ತು ಹಾಕಿದ ಶಾರದಾ ಮೇಲೆ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ
Advertisement
ಧಾರವಾಡ ಉಪನಗರ ಠಾಣೆಗೆ ಆಗಮಿಸಿದ ಸ್ಥಳೀಯರು, ಹಬ್ಬಕ್ಕೆ ಶಾರದಾ ಅವರು ಅಡ್ಡಿ ಪಡಿಸಿದ್ದಾರೆ. ಪದೇ ಪದೇ ಈ ರೀತಿ ಮಾಡಿರುವ ಅವರು, ಸರ್ಕಾರಿ ಅಧಿಕಾರಿ ಎಂದು ನಮ್ಮ ಮೇಲೆ ದರ್ಪ ತೊರಿಸಿದ್ದಾರೆ ಎಂದು ಆರೋಪಿಸಿದ್ದಾರೆ.