ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಮರುದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ. F-INSAS ಸಿಸ್ಟಂ, ನಿಪುಣ್ ಹೆಸರಿನ ಲ್ಯಾಂಡ್ ಮೈನ್ಸ್, ಎಲ್‌ಸಿಎಯನ್ನು ಹಸ್ತಾಂತರ ಮಾಡಿದ್ದಾರೆ.
F-INSAS ಸಿಸ್ಟಂ:
Future Infantry Soldier As A System ಹೃಸ್ವ ರೂಪವೇ F-INSAS. ಭಾರತೀಯ ಸೇನೆಯನ್ನು ಆಧುನಿಕರಣಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಮಾಡುತ್ತಿದ್ದು ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ. F-INSAS ಭಾಗವಾಗಿ ಸೈನಿಕರಿಗೆ ರಷ್ಯಾ ನಿರ್ಮಿತ ಎಕೆ -203 ಅಸಾಲ್ಟ್ ರೈಫಲ್ ನೀಡಲಾಗುತ್ತದೆ. 300 ಮೀಟರ್ ದೂರದಲ್ಲಿರುವ ಗುರಿಯನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವ ರೈಫಲ್ ಅನ್ನು ಉತ್ತರ ಪ್ರದೇಶದ ಅಮೇಠಿಯಲ್ಲಿ ರಷ್ಯಾ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿದೆ.
Advertisement
Advertisement
F-INSAS ಸಿಸ್ಟಂ ಅಡಿಯಲ್ಲಿ ಬ್ಯಾಲಿಸ್ಟಿಕ್ ಹೆಲ್ಮೆಟ್, ಬ್ಯಾಲಿಸ್ಟಿಕ್ ಕನ್ನಡಕ, ಬುಲೆಟ್ ಪ್ರೂಫ್ ಜಾಕೆಟ್ ನೀಡಲಾಗುತ್ತದೆ. ಎಕೆ 47 ಬಂದೂಕಿನಿಂದ ಹೊಡೆದ ಗುಂಡು ಅಲ್ಲದೇ 9 ಮಿಲಿ ಮೀಟರ್ ಗಾತ್ರದ ಗುಂಡುಗಳನ್ನು ಈ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಹೆಲ್ಮೆಟ್ ತಡೆಯುವ ಸಾಮರ್ಥ್ಯವನ್ನು ಹೊಂದಿರುವುದು ವಿಶೇಷ. ಇದನ್ನೂ ಓದಿ: ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?
Advertisement
ನಿಪುಣ್ ಲ್ಯಾಂಡ್ ಮೈನ್ಸ್:
ಪುಣೆಯಲ್ಲಿರುವ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ( Armament Research and Development Establishment) ಮತ್ತು ಭಾರತೀಯ ಸೇನೆ ಜಂಟಿಯಾಗಿ ನಿಪುಣ್ ಸ್ಫೋಟಕವನ್ನು ತಯಾರಿಸಿದೆ. ಗಡಿ ಭಾಗದಲ್ಲಿ ಉಗ್ರರು ನೆಲದ ಅಡಿಯಲ್ಲಿ ಸ್ಫೋಟಕ ಇಡುತ್ತಾರೆ. ಇದಕ್ಕೆ ಪ್ರತಿಯಾಗಿ ಸೇನೆಯೂ ಈಗ ಈ ರೀತಿಯ ಸ್ಫೋಟಕವನ್ನು ತಯಾರಿಸುತ್ತಿದೆ. ನಿಪುಣ್ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಳ್ಳುತ್ತದೆ. ಒಟ್ಟು 7 ಲಕ್ಷ ನಿಪುಣ್ ಲ್ಯಾಂಡ್ ಮೈನ್ಸ್‌ಗಳನ್ನು ಸೈನ್ಯಕ್ಕೆ ನೀಡಲು ಭಾರತೀಯ ಸೇನೆ ಮುಂದಾಗಿದೆ.
Advertisement
Delhi | Anti-personnel mine Nipun handed over to the Indian Army, by Defence Minister Rajnath Singh today. Around 7 lakh of these mines would be provided to the force manufactured by Indian private sector industry pic.twitter.com/v6xKR5B0cc
— ANI (@ANI) August 16, 2022
ಎಲ್‌ಸಿಎ:
ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ (LCA) ಸ್ವದೇಶಿ ನಿರ್ಮಿತ ದೋಣಿಯಾಗಿದೆ. ಲಡಾಖ್- ಚೀನಾ ಗಡಿಯಲ್ಲಿರುವ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸೀಮಿತ ಸಾಮರ್ಥ್ಯಗಳ ದೋಣಿಗಳ ಬದಲಿಯಾಗಿ ಈ ಎಲ್‌ಸಿಎಯನ್ನು ಇನ್ನು ಮುಂದೆ ಬಳಸಲಾಗುತ್ತದೆ. ಗೋವಾದ ಅಕ್ವೇರಿಯಸ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್‌ಸಿಎಯನ್ನು ಅಭಿವೃದ್ಧಿ ಪಡಿಸಿದೆ. ವೇಗ ಮತ್ತು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.