ಟಾಲಿವುಡ್ ನೆಪೋಟಿಸಂ ಬಗ್ಗೆ ಮಾತನಾಡಿದ ‘ಲಕ್ಕಿ ಭಾಸ್ಕರ್‌’ ನಿರ್ಮಾಪಕ ನಾಗ ವಂಶಿ

Public TV
1 Min Read
naga vamsi

ಕ್ಕಿ ಭಾಸ್ಕರ್, ಡಿಜೆ ಟಿಲ್ಲು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ನಾಗ ವಂಶಿ (Naga Vamsi) ಚಿತ್ರರಂಗದಲ್ಲಿನ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ನೆಪೋಟಿಸಂ ಇಲ್ಲ ಎಂದು ನಿರ್ಮಾಪಕ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ:ವಿಜಯ್‌ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್‌ ಶುರು

ಸಂದರ್ಶನವೊಂದರಲ್ಲಿ ಮಾತನಾಡಿದ ನಾಗ ವಂಶಿ, ಬೇರೇ ಚಿತ್ರರಂಗದಲ್ಲಿ ನನಗೆ ಗೊತ್ತಿಲ್ಲ. ಗೊತ್ತಿಲ್ಲದರ ಬಗ್ಗೆ ನಾನು ಮಾತನಾಡಲ್ಲ. ಆದರೆ ಟಾಲಿವುಡ್‌ನಲ್ಲಿ ನೆಪೋಟಿಸಂ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ನೆಪೋಟಿಸಂನಿಂದ ತೆಲುಗಿನಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಒಂದು ವೇಳೆ ತೊಂದರೆ ಆಗಿದ್ರೆ ನಾನಿ, ವಿಜಯ್ ದೇವರಕೊಂಡ, ನಿತಿನ್ ಯಾರು ಕೂಡ ಸ್ಟಾರ್ ಆಗುತ್ತಿರಲಿಲ್ಲ. ಇದನ್ನೂ ಓದಿ:ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

ಇನ್ನೂ ಬಾಲಿವುಡ್‌ನಲ್ಲಿ ಹೊರಗಿನಿಂದ ಬರುವವರಿಗೆ ಅವಕಾಶವಿರುವುದಿಲ್ಲ. ಆದರೆ ಟಾಲಿವುಡ್‌ನಲ್ಲಿ ಹಾಗಿಲ್ಲ. ಹೊರಗಿನಿಂದ ಬಂದವರಿಗೆ ಅವಕಾಶವಿದೆ ಎಂದಿದ್ದಾರೆ. ಅಲ್ಲು ಅರ್ಜುನ್, ರಾಮ್ ಚರಣ್ ಸ್ಟಾರ್‌ಗಳ ಮಕ್ಕಳಾಗಿದ್ದರೂ ಕೂಡ ಅವರು ಸಾಕಷ್ಟು ಶ್ರಮ ಹಾಕಿ ಮೇಲೆ ಬಂದಿದ್ದಾರೆ. ಆದರೆ ಬಾಲಿವುಡ್ ಸ್ಟಾರ್‌ಗಳ ಮಕ್ಕಳು ಎಫರ್ಟ್ ಹಾಕುವುದಿಲ್ಲ. ಪೋಷಕರ ಸ್ಟಾರ್‌ಗಿರಿಯ ಮೇಲೆ ಗೆಲ್ಲಲು ಪ್ರಯತ್ನಿಸುತ್ತಾರೆ ಎಂದು ನಿರ್ಮಾಪಕ ಹೇಳಿದ್ದಾರೆ.

Share This Article