– 10 ವರ್ಷದ ಹಿಂದೆ ಪ್ರೀತಿಸಿ ಮದುವೆ
– 4 ವರ್ಷದ ಹಿಂದೆ ಕಾರ್ಕಳಕ್ಕೆ ಬಂದಿದ್ದ ದಂಪತಿ
ಉಡುಪಿ: ಸೇನಾ ಹೆಲಿಕಾಪ್ಟರ್ ದುರಂತಕ್ಕೆ ದೇಶಕ್ಕೆ ದೇಶವೇ ಮರುಗುತ್ತಿದೆ. ಈ ದುರ್ಘಟನೆಯಲ್ಲಿ ಉಡುಪಿ ಜಿಲ್ಲೆಯ ಅಳಿಯ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಹುತಾತ್ಮರಾಗಿದ್ದು, ಈಗ ಕಾರ್ಕಳದಲ್ಲಿ ನೀರವ ಮೌನ ಆವರಿಸಿದೆ.
Advertisement
ಹರ್ಜಿಂದರ್ ಬಿಪಿನ್ ರಾವತ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹರ್ಜಿಂದರ್ ಸಿಂಗ್‍ಗೆ ಕರ್ನಾಟಕಕ್ಕೆ ಅವಿನಾಭವ ಸಂಬಂಧವಿತ್ತು. ಹರ್ಜಿಂದರ್ ಸಿಂಗ್ ಸುಮಾರು 10 ವರ್ಷಗಳ ಹಿಂದೆ ಸೇನೆಯಲ್ಲಿರುವ ಕಾರ್ಕಳದ ಪ್ರಫುಲ್ಲ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆಗಾಗ ಕಾರ್ಕಳಕ್ಕೆ ಬರುತ್ತಿದ್ದ ಕರ್ನಲ್ ದಂಪತಿಯನ್ನು ನೆನೆದು ಕಾರ್ಕಳ ಸಾಲ್ಮರದ ಮಿನೇಜಸ್ ಕುಟುಂಬ ಕಣ್ಣೀರಿಡುತ್ತಿದೆ.
Advertisement
Advertisement
ಪ್ರಪುಲ್ಲಾ ಅವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಹರ್ಜಿಂದರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇತ್ತೀಚೆಗೆ ಸ್ವಯಂ ನಿವೃತ್ತಿಯನ್ನು ಪಡೆದು ಸೇನಾ ಶಾಲೆಯಲ್ಲೇ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ಪ್ರಪುಲ್ಲಾ ದಂಪತಿ ಕಾರ್ಕಳಕ್ಕೆ ಬಂದಿದ್ದರು. ತುಂಬಾ ಕಾಲ ಇಲ್ಲಿಯೇ ಇದ್ದರು. ತಂದೆ-ತಾಯಿ ಅಕ್ಕಂದಿರ ಜೊತೆ ಚೆನ್ನಾಗಿ ಸಮಯ ಕಳೆದಿದ್ದರು. ಇದನ್ನೂ ಓದಿ: ಪತನಗೊಂಡ ಹೆಲಿಕಾಪ್ಟರ್‌ನಲ್ಲಿ ಬ್ಲ್ಯಾಕ್ ಬಾಕ್ಸ್ ಪತ್ತೆ- ಬಯಲಾಗುತ್ತಾ ದುರಂತದ ರಹಸ್ಯ?
Advertisement
ಹರ್ಜಿಂದರ್ ಸಿಂಗ್ ಮೃದು ವ್ಯಕ್ತಿ ಆಗಿದ್ದರು. ಎಲ್ಲರೊಂದಿಗೂ ಚೆನ್ನಾಗಿ ಬೆರೆಯುತ್ತಿದ್ದರು. ಉತ್ತರ ಭಾರತ, ದಕ್ಷಿಣ ಭಾರತದ ಜೊತೆ ಒಡನಾಟವಿತ್ತು. ಕುಟುಂಬಸ್ಥರಿಗೆ ಹರ್ಜಿಂದರ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದ ನಂತರ ಮಾಧ್ಯಮ ಹಾಗೂ ಸೇನೆಯಿಂದ ತಿಳಿದು ಬಂದಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇದನ್ನೂ ಓದಿ: ತೀರಾ ಕೆಳಮಟ್ಟದಲ್ಲೇ ಹಾರಾಡ್ತಿದ್ದ ಹೆಲಿಕಾಪ್ಟರ್ ಕೊನೆಯ ದೃಶ್ಯ ಲಭ್ಯ
ಹರ್ಜಿಂದರ್ ಸಿಂಗ್ ಅವರ ಪಾರ್ಥಿವ ಶರೀರವನ್ನು ರಾತ್ರಿ 8 ಗಂಟೆ ಸುಮಾರಿಗೆ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಂತಿಮ ಸಂಸ್ಕಾರಕ್ಕೆ ಕುಟುಂಬ ಅಲ್ಲಿಗೆ ಹೋಗಲಿದೆ. ನಾಳೆ 11 ಗಂಟೆಗೆ ಅಂತಿಮ ನಮನಕ್ಕೆ ವ್ಯವಸ್ಥೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡಿನಲ್ಲಿ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ದುರ್ಮರಣಕ್ಕೀಡಾದವರ ಅಂತಿಮ ದರ್ಶನವನ್ನು ನಾಳೆ ದೆಹಲಿಯಲ್ಲಿ ಪಡೆಯಬಹುದು. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ