ಕಲಬುರಗಿ: ಮನೆ ಮನೆಗೆ ಸರಬರಾಜಾಗುವ ಗ್ಯಾಸ್ ಸಿಲಿಂಡರ್‌ಗಳಲ್ಲಿ (Gas Cylinder) 2 ಕೆಜಿಯಷ್ಟು ಗ್ಯಾಸ್ (LPG Gas) ಕಳ್ಳತನ ಮಾಡಿ ಬಳಿಕ ಮನೆಗಳಿಗೆ ಒದಗಿಸುತ್ತಿರುವುದು ಕಲಬುರಗಿಯಲ್ಲಿ (Kalaburagi) ಬೆಳಕಿಗೆ ಬಂದಿದೆ. ದಿನದಿಂದ ದಿನಕ್ಕೆ ಅಡುಗೆ ಸಿಲಿಂಡರ್ ಬೆಲೆ ಗಗನಕ್ಕೆ ಏರುತ್ತಿದೆ ಈಗ ಗ್ಯಾಸ್ ಎಜನ್ಸಿಯವರು ಇದನ್ನೇ ಬಂಡವಾಳ ಮಾಡಿಕೊಂಡು ವಂಚನೆಗೆ ಇಳಿದಿದ್ದಾರೆ.
ನಗರದ ಆಳಂದ ಕಾಲೋನಿಯಲ್ಲಿ ಮನೆಗೆ ಸಪ್ಲೈ ಮಾಡುವ ಸಿಲಿಂಡರ್‍ನಲ್ಲಿ ಕದಿಯುವ ದಂಧೆ ಶುರುವಾಗಿದೆ. ಇಲ್ಲಿನ ನಿವಾಸಿ ಮುಕೇಶ್ ಠಾಕೂರ್ ಎಂಬುವರ ಮನೆಗೆ ಸರಬರಾಜು ಮಾಡುವ ಸಿಲಿಂಡರ್‍ನಲ್ಲಿ ಹಲವು ದಿನಗಳಿಂದ ಕಡಿಮೆ ಗ್ಯಾಸ್ ಬರುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನೂ ಓದಿ: ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು: ಭೂಕಕ್ಷೆ ತೊರೆದು ಚಂದ್ರನ ಕಡೆಗೆ ಯಶಸ್ವಿ ಪ್ರಯಾಣ
Advertisement
ಇದರಿಂದ ಸಿಲಿಂಡರ್ ಇಳಿಸಲು ಬಂದಿದ್ದಾಗ ತೂಕ ಮಾಡಲು ಡೆಲಿವರಿ ಬಾಯ್‍ಗೆ ಹೇಳಿದ್ದಾರೆ. ಆದರೆ ಡಿಲಿವರಿ ಬಾಯ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಒಂದು ವಾರದ ಬಳಿಕ ತೂಕ ಯಂತ್ರ ಸಮೇತ ಬಂದು ತೂಕ ಮಾಡಿದ್ದಾಗ ಸಿಲಿಂಡರ್ ಭಾರ ಸೇರಿ ಅದರ ಒಳಗಿನ ಗ್ಯಾಸ್ ಸರಿಯಾಗಿದೆ ಅಂದಿದ್ದಾರೆ. ಇದರಿಂದ ಏಜೆನ್ಸಿ ತೂಕ ಯಂತ್ರದ ಮೇಲೆ ಅನುಮಾನಗೊಂಡು ಮುಕೇಶ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೂಕ ಮಾಡಿಸಿದ್ದಾರೆ. ಆಗ ಸಿಲಿಂಡರ್‍ನಲ್ಲಿ 2 ಕೆಜಿಗೂ ಹೆಚ್ಚಿನ ಗ್ಯಾಸ್ ಕಡಿಮೆ ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
Advertisement
Advertisement
ಮನೆಗಳಿಗೆ ಸರಬರಾಜು ಮಾಡುವ ಪ್ರತಿ ಸಿಲಿಂಡರ್‌ನ ತೂಕವನ್ನು ಸರ್ಕಾರ ದೃಢಿಕರಿಸಿ ಸ್ಟ್ಯಾಪಿಂಗ್ ಮಾಡಿಸಿದ ಯಂತ್ರದಲ್ಲಿಯೇ ತೂಕ ಮಾಡಿಯೇ ಗ್ರಾಹಕರಿಗೆ ಕೊಡಬೇಕು ಎಂಬ ನಿಯಮವಿದೆ. ರಾಜ್ಯದಲ್ಲಿನ ಬಹುತೇಕ ಗ್ಯಾಸ್ ಏಜೆನ್ಸಿಗಳ ತೂಕ ಯಂತ್ರಗಳು ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸ್ಟ್ಯಾಪಿಂಗ್ ಮಾಡಿಕೊಂಡಿಲ್ಲ. ಪ್ರತಿ ಪ್ಯಾಕ್ಡ್ ಸಿಲಿಂಡರ್‍ನಿಂದ 2 ಕೆಜಿಯಷ್ಟು ಅಡುಗೆ ಅನಿಲವನ್ನು ಖಾಲಿಯಾದ ಸಿಲಿಂಡರ್‌ಗಳಿಗೆ ಭರ್ತಿ ಮಾಡಿ ನಂತರ ಆ ಸಿಲಿಂಡರ್‍ನ್ನು ಯಥಾವತ್ತಾಗಿ ಪ್ಯಾಕ್ ಮಾಡಿ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ.
Advertisement
ಹೀಗೆ ಸಿಲಿಂಡರ್ ಖರೀದಿಸುವ ಗ್ರಾಹಕರು ಸಿಲಿಂಡರ್ ಪ್ಯಾಕ್ ಇದೆ ಅಂತಾ ಖರೀದಿಸಿ ಮೋಸ ಹೋಗುತ್ತಿದ್ದಾರೆ. ಈ ಮೂಲಕ ರಾಜ್ಯದ ಕೆಲ ಗ್ಯಾಸ್ ಏಜೆನ್ಸಿ ಹಾಗು ಸಪ್ಲೈ ಮಾಡುವ ನೌಕರರು ಗ್ರಾಹಕರಿಗೆ ವಂಚಿಸಿ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಪಾದಿಸ್ತಿದ್ದಾರೆ. ಸದ್ಯ ಗ್ಯಾಸ್ ಏಜೆನ್ಸಿಯ ಮಾಫಿಯಾದ ಬಗ್ಗೆ ಕಲಬುರಗಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಬಾರ್ಡರ್ ಲವ್ – ಭಾರತದ ಪ್ರೇಮಿಗಾಗಿ ಲಂಕಾದಿಂದ ಹಾರಿ ಬಂದ ಲಂಕಿಣಿ!
Web Stories