ಮುಂಬೈ: 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಅವರಿಗೆ ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟ ಪ್ರವೇಶಿಸಲು ಮಾನ್ಯತೆ ನೀಡಲಾಗಿದೆ.
`ನಾನು ಕಾಮನ್‌ವೆಲ್ತ್ ಗೇಮ್ಸ್-2022ಗೆ ಮಾನ್ಯತೆ ಪಡೆದುಕೊಂಡಿದ್ದೇನೆ’ ಎಂದು ಲವ್ಲಿನಾ ಬಾರ್ಗೊಹೈನ್ ಅವರ ಕೋಚ್ ಸಂಧ್ಯಾ ಗುರುಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!
Advertisement
Boxer Lovlina Borgohain's coach Sandhya Gurung gets accreditation for CWG 2022
Read @ANI Story | https://t.co/klESnBeWsW#LovlinaBorgohain #boxing #SandhyaGurung #CWG22 pic.twitter.com/D5OluVno7q
— ANI Digital (@ani_digital) July 26, 2022
Advertisement
ನನ್ನ ಕೋಚ್ (ತರಬೇತುದಾರ)ಗೆ ಮಾನ್ಯತೆ ಇಲ್ಲದಿರುವುದರಿಂದ ನನಗೆ ಮಾನಸಿಕ ಕಿರುಕುಳ ಎದುರಾಗಿದೆ. ನನ್ನ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೂ ಅಡ್ಡಿಯಾಗುತ್ತಿದೆ ಎಂದು ಲವ್ಲಿನಾ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದ್ದರು.
Advertisement
ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಲವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿತ್ತು. ಇದನ್ನೂ ಓದಿ: ಗಂಡನ ಬೆತ್ತಲೆ ಫೋಟೋ ಶೂಟ್ ಮಾಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ
Advertisement
https://twitter.com/LovlinaBorgohai/status/1551520397832720385?ref_src=twsrc%5Etfw%7Ctwcamp%5Etweetembed%7Ctwterm%5E1551520397832720385%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fother-sports%2Flovlina-borgohains-coach-sandhya-gurung-gets-accreditation-for-cwg-2022-after-boxer-makes-harassment-claims-2489788.html
ಯಾರಿದು ಲವ್ಲಿನಾ?
ಭಾರತೀಯ ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ.