ತನಗೆ ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಮತ್ತು ಹಾಕಿದ ಬಂಡವಾಳಕ್ಕೆ ಡಬಲ್ ಹಣ ಕೊಡುತ್ತೇನೆ ಎಂದು ಸ್ಯಾಂಡಲ್ ವುಡ್ (Sandalwood) ನಿರ್ಮಾಪಕರೊಬ್ಬರು ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ತನ್ನಿಂದ ನಿರ್ಮಾಪಕನೊಬ್ಬ ದುಡ್ಡು ಪಡೆದು, ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ನಟಿಯೊಬ್ಬರು ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಟಗಾನಹಳ್ಳಿ ರಾಮಯ್ಯ ಅವರ ಕಥೆಯನ್ನು ಆಧರಿಸಿದ ‘ದಿ ಕಲರ್ಸ್ ಆಫ್ ಟೊಮ್ಯಾಟೊ’ (The Colors of Tomato) ಸಿನಿಮಾ ಈ ಹಿಂದೆ ಸೆಟ್ಟೇರಿತ್ತು. 1 ಟು 100 ಡ್ರೀಮ್ ಮೂವೀಸ್ ಬ್ಯಾನರ್ ಅಡಿ ಕುಮಾರ್ ಎನ್ನುವವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದೇ ಕುಮಾರ್ ಮಹಿಳೆಯನ್ನು ವಂಚಿಸಿದ್ದಾರೆ ಎಂದು ವಂಚಿತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದ ನಟಿ- ಐಕಾನ್ ಸ್ಟಾರ್ಗೆ ಶ್ರೀಲೀಲಾ ನಾಯಕಿ
ನಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಕನಸು ಕಂಡಿದ್ದ ನಟಿ. ಈ ಹೊತ್ತಿನಲ್ಲಿ ಕುಮಾರ್ (Kumar) ಅವರು ನನಗೆ ಪರಿಚಯವಾದರು. ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಹಾಗೂ ಸಿನಿಮಾಗೆ 75 ಲಕ್ಷ ರೂಪಾಯಿ ಬಂಡವಾಳ ಹಾಕಿದರೆ, ಸಿನಿಮಾ ಹಿಟ್ ಆದ ನಂತರ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ‘50’ ಮತ್ತು ‘ದಿ ಕಲರ್ಸ್ ಆಫ್ ಟೊಮ್ಯಾಟೊ’ ಸಿನಿಮಾ ಮಾಡುತ್ತಿರುವುದರಿಂದ ದುಡ್ಡಿನ ಅವಶ್ಯಕತೆ ಇದೆ ಎಂದು ಹೇಳಿದ್ದರು. ಈ ಕಾರಣದಿಂದಾಗಿ ನಾನು ದುಡ್ಡು ಕೊಟ್ಟಿದ್ದೇನೆ. ನಂತರದ ದಿನಗಳಲ್ಲಿ ದುಡ್ಡು ಕೊಡದೇ ತಮಗೆ ಮೋಸ ಮಾಡಿದ್ದಾರೆ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೇವಲ ದುಡ್ಡಿನ ವಿಚಾರ ಮಾತ್ರವಲ್ಲ, ನಂತರದ ದಿನಗಳಲ್ಲಿ ನಿನಗೆ ಬಾಳು ಕೊಡುತ್ತೇನೆ ಎಂದು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನನಗೆ ವಾಪಸ್ಸು ಹಣ ಕೊಡಿ ಎಂದು ಕೇಳಿದಾಗ ಚೆಕ್ ಕೊಡುತ್ತೇನೆ ಬಾ ಎಂದು ಕರೆಯಿಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ನಟಿ ಬರೆದಿದ್ದಾರೆ. ನಟಿ ನೀಡಿದ ದೂರಿನ ಮೇರೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.