ಕನ್ನಡತಿ ಶ್ರೀಲೀಲಾ (Sreeleela) ಅವರಿಗೆ ಇಂದು (ಜೂನ್ 14) ಜನ್ಮದಿನದ ಸಂಭ್ರಮವಾಗಿದ್ದು, ತಮ್ಮ ಅಭಿಮಾನಿಗಳಿಗೆ ಸಿನಿಮಾಗಳ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಪುಷ್ಪರಾಜ್ ಅಂದ್ರೆ ಐಕಾನ್ ಸ್ಟಾರ್‌ಗೆ ನಾಯಕಿಯಾಗುವ ಮೂಲಕ ಸೂಪರ್ ಅಚ್ಚರಿ ನೀಡಿದ್ದಾರೆ. ರಶ್ಮಿಕಾಗಿಂತ (Rashmika Mandanna) ಶ್ರೀಲೀಲಾಗೆ ಇದೀಗ ಡಿಮ್ಯಾಂಡ್ ಜಾಸ್ತಿ ಆಗಿದೆ. 5ಕ್ಕೂ ಹೆಚ್ಚು ಸಿನಿಮಾ ಟೀಂನಿಂದ ಕಿಸ್ ಚಿತ್ರದ ನಟಿಗೆ ವಿಶ್ ಬಂದಿದೆ.
‘ಕಿಸ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ನಾಯಕಿಯಾಗಿ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ, ಭರಾಟೆ, ಬೈಟು ಲವ್, ಚಿತ್ರಗಳಲ್ಲಿ ನಟಿಸಿದ್ರು. ಪೆಳ್ಳಿ ಸಂದಡಿ ಚಿತ್ರದಿಂದ ತೆಲುಗಿಗೆ ಶ್ರೀಲೀಲಾ ಎಂಟ್ರಿ ಕೊಟ್ಟರು. ಬಳಿಕ ರವಿತೇಜಗೆ ನಾಯಕಿಯಾಗಿ ಧಮಾಕ ಚಿತ್ರದಲ್ಲಿ ಮಿಂಚಿದ್ದರು. ಈ ಸಿನಿಮಾ ಸಕ್ಸಸ್ ನಂತರ ತೆಲುಗಿನ 9ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ‘ಪುಷ್ಪ’ ನಟಿ ರಶ್ಮಿಕಾ ಮಂದಣ್ಣಗೆ ಶ್ರೀಲೀಲಾ ಟಫ್ ಕಾಂಪಿಟೇಶನ್ ಕೊಡ್ತಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ
Advertisement
Advertisement
ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದಲ್ಲಿ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಇದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ನಿತಿನ್ 32ನೇ ಚಿತ್ರಕ್ಕೆ ಅವರು ನಾಯಕಿ. ಇದರ ಪೋಸ್ಟರ್ ಕೂಡ ರಿಲೀಸ್ ಆಗಿದೆ. ‘ಬೋಯಪತಿ ರ‍್ಯಾಪೋ’ ಸಿನಿಮಾದಲ್ಲೂ ಶ್ರೀಲೀಲಾ ನಟಿಸುತ್ತಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.
Advertisement
Advertisement
ಅಲ್ಲು ಅರ್ಜುನ್ (Allu Arjun) ಅವರು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಂ ಶ್ರೀನಿವಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಆಹಾ’ ನಿರ್ಮಾಣದ ಮೊದಲ ಸಿನಿಮಾ ಇದು. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ. ‘ಆಹಾ’ ಕಡೆಯಿಂದ ಒಂದು ಪೋಸ್ಟರ್ ಕೂಡ ಬಿಡುಗಡೆ ಆಗಿದೆ. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರು ಶ್ರೀಲೀಲಾ ಅವರನ್ನು ಎತ್ತುಕೊಂಡಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೊದಲ ಸಿನಿಮಾ ಇದಾಗಿದೆ. ಸದ್ಯ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.