ಎಡಿನ್‍ಬರ್ಗ್: ಸಾಕಿದ ಬೆಕ್ಕನ್ನು ಕಳೆದುಕೊಂಡಿದ್ದ ಸ್ಕಾಟ್ಲೆಂಡಿನ ಮಹಿಳೆಯೊಬ್ಬರು 17 ವರ್ಷಗಳ ಬಳಿಕ ಅದೇ ಬೆಕ್ಕನ್ನು ಮತ್ತೆ ಪಡೆದ ರೋಚಕಕಾರಿ ಘಟನೆ ನಡೆದಿದೆ.
ಕಿಮ್‍ಕೋಲಿನ್ ಬೆಕ್ಕೊಂದನ್ನು ಸಾಕಿದ್ದರು. ಅದಕ್ಕೆ ಟಿಲ್ಲಿ ಎಂಬ ಹೆಸರಿಟ್ಟಿದ್ದರು. ಆದರೆ ಕಿಮ್‍ಕೋಲಿನ್ ಅವರು ಇಂಗ್ಲೆಂಡಿನಿಂದ ಸ್ಕಾಟ್ಲೆಂಡ್‍ನ ಮಿಡ್ಲೋಥಿಯನ್‍ಗೆ ಮನೆ ಬದಲಾವಣೆ ಮಾಡುವ ವೇಳೆ ಟಿಲ್ಲಿ ತಪ್ಪಿಸಿಕೊಂಡಿತ್ತು. ಆದರೂ ಛಲ ಬಿಡದ ಕಿಮ್ ತಮ್ಮ ಮುದ್ದಿನ ಬೆಕ್ಕು ಟಿಲ್ಲಿಯನ್ನು ಹುಡುಕುವ ಸಲುವಾಗಿ ನಿರಂತರವಾಗಿ ಪೋಸ್ಟ್‍ಗಳನ್ನು ಹಾಕಿದ್ದಾರೆ.ಇದರ ಫಲವಾಗಿ 17 ವರ್ಷಗಳ ಬಳಿಕ ಆ ಬೆಕ್ಕು ಅವರಿಗೆ ಮತ್ತೆ ಸಿಕ್ಕಿದೆ. ಇದಕ್ಕಾಗಿ ಅವರು ಬೆಕ್ಕಿಗೆ ಅಳವಡಿಸಿದ್ದ ಮೈಕ್ರೋಚಿಪ್‍ಗೆ ಧನ್ಯವಾದ ಹೇಳಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿದ ಕಿಮ್‍ಕೋಲಿನ್ ಅವರು, ಟೆಲ್ಲಿ 17 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜಾಗದಲ್ಲೇ ಪ್ರತ್ಯೇಕ್ಷವಾಗಿದ್ದಾಳೆ. ಬೆಕ್ಕು ಸಿಕ್ಕಿರುವ ಸಂತೋಷವನ್ನು ನನಗೆ ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತ ಹೈಕೋರ್ಟ್ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್ ಮಾಡಿದ ಓವೈಸಿ
Advertisement
20ನೇ ವರ್ಷಕ್ಕೆ ಕಾಲಿಡಲಿರುವ ಟಿಲ್ಲಿ ಟ್ಯೂಮರ್‍ನಿಂದ ಬಳಲುತ್ತಿದ್ದಾಳೆ. ಇನ್ನೂ ಕೆಲವೇ ದಿನ ಬದುಕುಳಿಯಲಿದೆ. ಈ ಹಿನ್ನೆಲೆಯಲ್ಲಿ ಬೆಕ್ಕಿಗೆ ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ
Advertisement