ತಿಮ್ಮಪ್ಪನ ದರ್ಶನಕ್ಕೆ ಸ್ಪೆಷಲ್ ಟಿಕೆಟ್- 1 ಗಂಟೆಗೆ 4.60 ಲಕ್ಷ ಟಿಕೆಟ್ ಸೇಲ್

Public TV
1 Min Read
Tirupati Balaji Temple 01

ಹೈದರಾಬಾದ್: ತಿಮ್ಮಪ್ಪನ ದರ್ಶನಕ್ಕೆ ಆನ್‍ಲೈನ್‍ನಲ್ಲಿ ಬಿಟ್ಟಿರುವ ಸ್ಪೆಷಲ್ ಟಿಕೆಟ್‍ಗಳು ಒಂದೇ ಗಂಟೆಗೆ 4.60 ಲಕ್ಷ ಟಿಕೆಟ್ಸ್ ಸೇಲ್ ಆಗಿದೆ.

ಜನವರಿ ತಿಂಗಳಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವವರಿಗೆ ತಿರುಮಲ ತಿರುಪತಿ ದೇವಸ್ಥಾನ ಆನ್‍ಲೈನ್‍ನಲ್ಲಿ ವಿಶೇಷ ದರ್ಶನದ ಟಿಕೆಟ್‍ಗಳನ್ನು ಬಿಡುಗಡೆ ಮಾಡಿದೆ. ಟಿಕೆಟ್ ಬಿಡುಗಡೆಯಾದ ಕೇವಲ 80 ನಿಮಿಷದಲ್ಲೇ ಮಾರಾಟವಾಗಿದೆ. ವಿಶೇಷ ದರ್ಶನಕ್ಕಾಗಿ ಒಂದು ಟಿಕೆಟ್‍ನ ಬೆಲೆ 300 ರೂಪಾಯಿ ಇದ್ದು, ಸುಮಾರು 4 ಲಕ್ಷದ 60 ಸಾವಿರ ಟಿಕೆಟ್‍ಗಳನ್ನು ಮಾರಾಟ ಮಾಡಲಾಗಿದೆ. ಇದನ್ನೂ ಓದಿ: 1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ತಿರುಪತಿ ತಿಮ್ಮಪ್ಪನಿಗೆ ಅರ್ಪಣೆ

tirupati temple
ವೈಕುಂಠ ಏಕಾದಶಿಯ ಕಾರಣದಿಂದಾಗಿ ಹೆಚ್ಚಿನ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.  ಸರ್ವದರ್ಶನಂ ಟಿಕೆಟ್‍ಗಳನ್ನಿ ಇದೇ ತಿಂಗಳ 31 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು (Tirumala Tirupati Devasthanams )ಟಿಟಿಡಿ ತಿಳಿಸಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

 

Share This Article