ದೊಡ್ಮನೆಗೆ ಮತ್ತೊಂದು ಸಲ ಒಳ್ಳೆಯ ಹುಡುಗ ಪ್ರಥಮ್ (Pratham) ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಕಂಟೆಸ್ಟೆಂಟ್ ಆಗಿ ಹೋದವರು, ಟ್ರೋಫಿ ಗೆದ್ದುಕೊಂಡು ಹೊರ ಬಂದರು. ಇದೀಗ ಪ್ರಥಮ್ ಟಾಸ್ಕ್ ಆಡಿಸುವುದಕ್ಕಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಲಾರ್ಡ್ ಪ್ರಥಮ್ ಹೆಸರಿನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಲೇ ಗತ್ತಿನ ಮಾತುಗಳಿಂದ ಒಂದು ರೀತಿಯಲ್ಲಿ ಕುತೂಹಲ ಮೂಡಿಸಿದ್ದಾರೆ.
ಪ್ರಥಮ್ ಗಿಂತ ಮೊದಲು ಗನ್ ಮ್ಯಾನ್ ಎಂಟ್ರಿ
ದೊಡ್ಮನೆಯ ಆಟ ಜೋರಾಗಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಬದಲಾಗುತ್ತಿದೆ. ಈಗ ಮನೆಯ ಅಸಲಿ ಆಟ ಶುರುವಾಗಿದೆ. ಬಿಗ್ ಮನೆಗೆ ಗನ್‌ಮ್ಯಾನ್‌ಗಳು ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದಾರೆ. ಗನ್ ಮ್ಯಾನ್‌ಗಳ ಎಂಟ್ರಿ ನೋಡಿ ಮನೆಮಂದಿ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಗೆ(Bigg Boss House) 8 ಜನ ಗನ್ ಮ್ಯಾನ್‌ಗಳ (Gun Man) ಆಗಮನವಾಗಿದೆ. ಸಡನ್ ಆಗಿ ಗನ್ ಮ್ಯಾನ್‌ಗಳು ಎಂಟ್ರಿ ಕೊಟ್ಟಿರೋದು ನೋಡಿ ಮನೆ ಮಂದಿ ಒಮ್ಮೆ ಸೈಲೆಂಟ್ ಆಗಿದ್ದಾರೆ. ಬಳಿಕ ಚಪ್ಪಾಳೆ ಹೊಡೆದು ಸ್ಪರ್ಧಿಗಳು ಸ್ವಾಗತ ಕೋರಿದ್ದಾರೆ. ಅವರ ಮುಖದಲ್ಲಿರೋ ಮಂದಹಾಸ ನೋಡಿ ಮನೆಗೆ ಹೊಸ ಸೆಲೆಬ್ರಿಟಿ ಎಂಟ್ರಿ ಕೊಡ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಅಕ್ಟೋಬರ್ 9ರ ಎಪಿಸೋಡ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಆಗಮಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಿಗ್ ಮನೆಯಲ್ಲಿ 3 ಗಂಟೆಗಳ ಕಾಲ ಕಳೆಯುವ ಮೂಲಕ ಸ್ಪರ್ಧಿಗಳಿಗೆ ಸ್ಪೂರ್ತಿ ತುಂಬಿದ್ದರು. ಪ್ರದೀಪ್ ಈಶ್ವರ್ ಅವರ ಎಂಟ್ರಿಗೆ ರಾಜಕೀಯ ರಂಗದಲ್ಲಿ (Politics) ಕೋಲಾಹಲ ಎಬ್ಬಿಸಿದ್ದರೂ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡಿತ್ತು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]