ರುಚಿರುಚಿಯಾದ ಆಹಾರ ಸೇವಿಸುವುದೆಂದರೆ ಎಲ್ಲರಿಗೂ ಒಂದು ರೀತಿಯಲ್ಲಿ ಇಷ್ಟ. ಆದ್ರೆ ಅನ್ನದೊಂದಿಗೆ ಚಿಕನ್ ಕರಿ ಇದ್ರೆ ಎಷ್ಟು ಚಂದ ಅಲ್ವಾ. ಬಹಳ ಮಂದಿಯ ಊಟಕ್ಕೆ ಚಿಕನ್ ಕರಿ ಇರ್ಲೇಬೇಕು. ಚಿಕನ್ ಎಂದಾಕ್ಷಣ ನೆನಪಾಗೋದು ಚಿಕನ್ ಹರಿಯಾಲಿ. ಹಾಗಾದ್ರೆ ಈ ಚಿಕನ್ ಹರಿಯಾಲಿಯನ್ನು ನೀವೂ ಒಮ್ಮೆ ಟ್ರೈ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್- 1/5 ಕೆ.ಜಿ
* ಈರುಳ್ಳಿ _ 2
* ಎಣ್ಣೆ- 4-5 ಚಮಚ
* ಪುದಿನಾ – 1/2 ಕಪ್
* ಹಸಿಮೆಣಸು – 5-6
* ಏಲಕ್ಕಿ -3
* ಚೆಕ್ಕೆ -2
* ಜೀರಾ ಪೌಡರ್ – 1/2 ಚಮಚ
* ಖಾರದ ಪುಡಿ – 1 ಚಮಚ
* ಮೊಸರು – 1/2 ಕಪ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಕಪ್
* ಕೊತ್ತಂಬರಿ ಸೊಪ್ಪು – 1/2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
ಮಿಕ್ಸಿಗೆ ಮೊದಲು ಪುದಿನ ಸೊಪ್ಪು, ಮೊಸರು, ಹಸಿ ಮೆಣಸಿನಕಾಯಿ, ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ. ರುಬ್ಬಿದ ಮೇಲೆ ಪಕ್ಕದಲ್ಲಿರುವ ಬಾಣಲೆಗೆ ಎಣ್ಣೆ ಹಾಕಿ. ನಂತರ ಚೆಕ್ಕೆ, ಹಾಗೂ ಏಲಕ್ಕಿ ಹಾಕಿ. ಬಳಿಕ ಕಟ್ ಮಾಡಿದ ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಬೇಕು. ಸ್ವಲ್ಪ ಸಮಯದ ಮೇಲೆ ಚಿಕನ್ ಹಾಕಿ ಫ್ರೈ ಮಾಡಿ. ಇದನ್ನೂ ಓದಿ: ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್
Advertisement
ಚಿಕನ್ ಕಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಫ್ರೈ ಆಗುತ್ತಿರುವಾಗ ಜಿರಾ ಪೌಡರ್, ಖಾರ ಪುಡಿ, ಮೊಸರು ಇವುಗಳನ್ನು ಹಾಕಿ. ನಂತರ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿದ ಪದಾರ್ಥವನ್ನ ಬಾಣಲೆಗೆ ಹಾಕಿ ಸ್ವಲ್ಪ ಕುದಿಸಿ. ಕುದಿಸಿದ ಬಳಿಕ ಉಪ್ಪು ಹಾಕಿ. ನಂತರ 15-20 ನಿಮಿಷದಷ್ಟು ಬಾಣಲೆಯ ಮೇಲೆ ಮುಚ್ಚಳ ಹಾಕಿ ಬೇಯಿಸಿ. ಬೆಂದ ಮೇಲೆ ರುಚಿಯಾದ ಚಿಕನ್ ಹರಿಯಾಲಿ ಸಿದ್ಧವಾಗುತ್ತದೆ.