CinemaCricketLatestMain PostNationalSandalwoodSports

ಅಪ್ಪುಗೆ ವಿಶೇಷವಾಗಿ ಗೌರವ ಸಲ್ಲಿಸಿದ ಕ್ರಿಕೆಟಿಗ ಡೇವಿಡ್ ವಾರ್ನರ್

– ವಾರ್ನರ್ ಅಭಿಮಾನಕ್ಕೆ ಅಭಿಮಾನಿಗಳು ಫಿದಾ

ಸ್ಯಾಂಡಲ್‍ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನೆಲ್ಲಾ ಅಗಲಿ 1 ತಿಂಗಳಾದ್ರೂ ಅವರು ಇಲ್ಲದಿರೋ ಸತ್ಯವನ್ನು ನಮಗೆಲ್ಲಾ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇಡೀ ಕರುನಾಡು ಪ್ರತಿದಿನ ಅಪ್ಪು ನೆನದು ಕೊರಗುತ್ತಿದೆ. ಎಲ್ಲೇ ನೋಡಿದರೂ ಅಪ್ಪು ಫೋಟೋನೇ ಕಾಣಿಸುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ಅಪ್ಪುಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹೌದು. ರಾಜಕುಮಾರ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ರೀ ಫೇಸ್ ಆ್ಯಪ್ ಮೂಲಕ ಮಾಡಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಜೊತೆಗೆ ಹ್ಯಾಶ್ ಟ್ಯಾಗ್ ಬಳಸಿ ರೆಸ್ಪೆಕ್ಟ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಪ್ಪುಗೆ ವಾರ್ನರ್ ಡಿಫರೆಂಟ್ ಆಗಿ ನಮನ ಸಲ್ಲಿಸಿದ್ದಾರೆ. ವಾರ್ನರ್ ವಿಶೇಷ ಗೌರವಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ

ವಾರ್ನರ್ ಅವರ ವೀಡಿಯೋ ನೋಡಿ ಅಪ್ಪು ಅಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ. ಕನ್ನಡ ಮೇಲಿರುವ ಪ್ರೀತಿ, ಅಪ್ಪು ಮೇಲಿರುವ ಗೌರವಕ್ಕೆ ಧನ್ಯವಾದ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಕೂಡ ವಾರ್ನರ್ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ. ಹೃದಯಂತರಾಳದ ನಮನಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಕನಸಿನ ಯೋಜನೆ, ವನ್ಯಜೀವಿ ಆಧಾರಿತ ಚಿತ್ರ ‘ಗಂಧದ ಗುಡಿ’ಯ ಟೀಸರ್ ಡಿಸೆಂಬರ್ 6ಕ್ಕೆ ರಿಲೀಸ್

ಇತ್ತ ಪುನೀತ್ ರಾಜ್‍ಕುಮಾರ್ ಅವರ ಕನಸು ಇಂದು ನನಸಾಗ್ತಿದೆ. ಕನ್ನಡ ನಾಡಿನ ಅರಣ್ಯಸಂಪತ್ತು, ವನ್ಯಜೀವಿ ಸಂಪತ್ತಿನ ಬಗ್ಗೆ ಚಿತ್ರಿಸಿರೋ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ ಆಗ್ತಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು `ಹಿಂದೆಂದೂ ಕಾಣದ ಸಿನಿಮಾ ಅನುಭವ. ನಿಮ್ಮ ಮುಂದೆ’ ಅಂತ ಟ್ವೀಟ್ ಮಾಡಿದ್ದಾರೆ. ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಟೈಟಲ್ ಟೀಸರ್ ಬಿಡುಗಡೆ ಆಗಲಿದೆ ಅಂತ ಟ್ವೀಟ್ ಮಾಡಿದ್ದಾರೆ. ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಅಪ್ಪು ಈ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಸಿದ್ದರು.

 

View this post on Instagram

 

A post shared by David Warner (@davidwarner31)

 

Leave a Reply

Your email address will not be published.

Back to top button