ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಆರ್. ಪುರಂನ ತಹಶೀಲ್ದಾರ್ ಅಜಿತ್ ರೈನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಹಶೀಲ್ದಾರ್ ಮನೆ, ಕಚೇರಿ ದಾಳಿ ನಡೆಸಿ ಎರಡು ದಿನಗಳ ಕಾಲ ನಿರಂತರ ಪರಿಶೀಲನೆ ಬಳಿಕ ಅರೆಸ್ಟ್ ಮಾಡಿದ್ದಾರೆ.
ಲೋಕಾಯುಕ್ತ ಪೊಲೀಸರ ತನಿಖೆಗೆ ಸರಿಯಾಗಿ ಸ್ಪಂದಿಸಿಲ್ಲ. ಮನೆಯಲ್ಲಿ ಸಿಕ್ಕ ದಾಖಲೆಗಳಿಗೆ ಸಂಬಂಧಿಸಿದಂತೆ ಸರಿಯಾದ ಉತ್ತರ ನೀಡಿಲ್ಲ. ಕಳೆದ 30 ಗಂಟೆಗಳಿಂದ ಮನೆಯಲ್ಲಿ ನಿರಂತರ ಶೋಧ ನಡೆಸಲಾಗಿತ್ತು. ಹೀಗಾಗಿ ತಹಶೀಲ್ದಾರ್ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ತಹಶೀಲ್ದಾರ್ ಮನೆ ಮೇಲೆ ಮುಂದುವರೆದ ʼಲೋಕಾʼ ದಾಳಿ – ಬಗೆದಷ್ಟು ಸಿಗುತ್ತಿದೆ ಕೋಟಿಗಟ್ಟಲೇ ಆಸ್ತಿ
Advertisement
Advertisement
ಅಜಿತ್ ರೈ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದಾರೆ. ಎಲ್ಲದಕ್ಕೂ ಒಂದೇ ನಂಬರ್ ರಿಜಿಸ್ಟರ್ ಇದೆ. ಇದ್ಯಾವುದಕ್ಕೂ ಲೆಕ್ಕ ಕೊಡ್ತಾ ಇಲ್ಲ. ಸರಿ ಸುಮಾರು 150 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.
Advertisement
Advertisement
ತಹಶೀಲ್ದಾರ್‌ನನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ನಾಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಮತ್ತೆ ವಶಕ್ಕೆ ಪಡೆಯಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಬಕ್ರೀದ್ ಆಚರಣೆ – ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ
Web Stories