– ಪ್ರಾಣಿಗಳಿಗೆ ಕಲ್ಯಾಣ ಮಂಡಳಿಗಳಿವೆ, ನಮಗೆ ಅಂತಹ ವ್ಯವಸ್ಥೆ ಇಲ್ಲ
ನವದೆಹಲಿ: ರಾಷ್ಟ್ರ ರಾಜಧಾನಿಯ (Delhi) ಲೋಕಸಭಾ ಅಖಾಡಕ್ಕೆ (Lok sabha Elections 2024) ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು (1st Third Gender Candidate) ಇಳಿದಿದ್ದಾರೆ. ದಕ್ಷಿಣ ದೆಹಲಿ ಕ್ಷೇತ್ರದಿಂದ ರಾಜನ್ ಸಿಂಗ್ (26) ಎಂಬ ತೃತೀಯಲಿಂಗಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
Advertisement
ಧೋತಿ, ಕ್ಯಾಪ್ ಮತ್ತು ಚಿನ್ನದ ಆಭರಣಗಳನ್ನು ಧರಿಸಿ, ಏಕಾಂಗಿಯಾಗಿ ಸಾಕೇತ್‍ನಲ್ಲಿರುವ ದಕ್ಷಿಣ ದೆಹಲಿಯ ಚುನಾವಣಾಧಿಕಾರಿಯ ಕಚೇರಿಗೆ ತೆರಳಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತೃತೀಯಲಿಂಗಿಗಳಿಗೆ ಪ್ರತ್ಯೇಕ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ಮತ್ತು ಅವರ ಸಾಮಾಜಿಕ ಸ್ಥಿತಿಗತಿ ಮತ್ತು ಹಕ್ಕುಗಳಿಗಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನರು ಮತ್ತು ಅಧಿಕಾರಿಗಳ ಗಮನ ಸೆಳೆಯಲು ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
Advertisement
ಸರ್ಕಾರವು ರಾಷ್ಟ್ರೀಯ ತೃತೀಯ ಲಿಂಗಿಗಳ ಆಯೋಗವನ್ನು ಸ್ಥಾಪಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದಾಗಿ ನಮ್ಮ ಮೂಲಭೂತ ಅಗತ್ಯಗಳು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕನಿಷ್ಠ 1% ಮೀಸಲಾತಿಯನ್ನಾದರೂ ಜಾರಿಗೆ ತರಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ
Advertisement
Advertisement
ನಾನು ಗೆದ್ದರೆ, ತೃತೀಯ ಲಿಂಗಿಗಳ ಮೂಲಭೂತ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ. ಪ್ರಾಣಿಗಳ ರಕ್ಷಣೆಗೆ ಕಲ್ಯಾಣ ಮಂಡಳಿಗಳಿವೆ. ನಮ್ಮಂತಹ ತೃತೀಯ ಲಿಂಗಿಗಳಿಗೆ ಅಂತಹ ಯಾವುದೇ ವ್ಯವಸ್ಥೆ ಇಲ್ಲ. ತೃತೀಯ ಲಿಂಗಿಗಳನ್ನು ಅಧಿಕೃತ ದಾಖಲೆಗಳಲ್ಲಿ ಗುರುತಿಸಲಾಗಿದೆ. ಆದರೆ ಸಮಾಜ ಇನ್ನೂ ಅವರನ್ನು ಅಂಗೀಕರಿಸಿಲ್ಲ. ಸಮುದಾಯದಿಂದ ಯಾವುದೇ ಪ್ರಮುಖ ರಾಜಕೀಯ ಪಕ್ಷದಲ್ಲಿ ನಾಯಕರು ಏಕೆ ಇಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ.
ರಾಜನ್ ಸಿಂಗ್ ಕೈಯಲ್ಲಿ 1 ಲಕ್ಷ ರೂ. ನಗದು ಮತ್ತು 200 ಗ್ರಾಂ ಚಿನ್ನ ಮತ್ತು 15.10 ಲಕ್ಷ ರೂ. ಮೌಲ್ಯದ ಒಟ್ಟು ಚರ ಆಸ್ತಿಯನ್ನು ಘೋಷಿಸಿದ್ದಾರೆ. ಅವರು ನಗರದ ಸಂಗಮ್ ವಿಹಾರ್ ಪ್ರದೇಶದಲ್ಲಿ ವಾಸವಾಗಿದ್ದು, ಮೂಲತಃ ಅವರು ಬಿಹಾರದವರಾಗಿದ್ದಾರೆ. ಇದನ್ನೂ ಓದಿ: ಚಾರ್ ಸೌ ಫಾರ್ ಗುರಿ – ಮೂರನೇ ಹಂತದ ಮತದಾನ ಬಿಜೆಪಿಗೆ ಎಷ್ಟು ಮುಖ್ಯ?