ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ (Shiv Sena) ಮತ್ತೆ ಒಂದಾಗುತ್ತಾ? ಶಿವಸೇನೆ ಮತ್ತೆ ಎನ್‌ಡಿಎ ಮೈತ್ರಿ ಸೇರುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ.
ಇಂದು ದೆಹಲಿಯಲ್ಲಿ ಇಂಡಿಯಾ (INDIA) ಒಕ್ಕೂಟದ ಸಭೆ ನಡೆಯಲಿದೆ. ಈ ಸಭೆಗೆ ಉದ್ಧವ್ ಠಾಕ್ರೆ (Uddhav Thackeray) ಗೈರಾಗಲಿದ್ದಾರೆ. ಉದ್ಧವ್ ಠಾಕ್ರೆ ಗೈರಾಗುತ್ತಿರುವ ಬೆನ್ನಲ್ಲೇ ಮತ್ತೆ ಎನ್‌ಡಿಎ ಸೇರುತ್ತಾರಾ ಪ್ರಶ್ನೆಗಳು ಹುಟ್ಟಿಕೊಂಡಿದೆ.
Advertisement
ಮಾಧ್ಯಮಗಳ ವರದಿ ಪ್ರಕಾರ ಉದ್ಧವ್ ಠಾಕ್ರೆ ಅವರು ಎನ್‌ಸಿಪಿ (NCP) ಮತ್ತು ಕಾಂಗ್ರೆಸ್ (Congress) ವಿರುದ್ಧ ಮುನಿಸಿಕೊಂಡಿದ್ದಾರೆ. ಈ ಮುನಿಸಿಗೆ ಕಾರಣ ಸಾಂಗ್ಲಿ ಕ್ಷೇತ್ರದಲ್ಲಿನ ಸೋಲು.
Advertisement
Advertisement
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಸಾಂಗ್ಲಿಯಲ್ಲಿ ಉದ್ಧವ್ ಠಾಕ್ರೆ ಅವರ ಪಕ್ಷದಿಂದ ಚಂದ್ರಹರ ಸುಭಾಶ್ ಪಾಟೀಲ್ ಕಣಕ್ಕೆ ಇಳಿದಿದ್ದರು. ಆದರೆ ಫಲಿತಾಂಶ ಪ್ರಕಟವಾದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವಿಶಾಲ್ ಪ್ರಕಾಶ್‌ಬಾಪು ಪಟೀಲ್ 1,00,053 ಮತಗಳ ಅಂತರದಿಂದ ಜಯಗಳಿಸಿದ್ದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದವರು ಸೇರಿ 9 ಮಂದಿ ಸಾವು
Advertisement
ವಿಶಾಲ್ ಪ್ರಕಾಶ್‌ಬಾಪು 5,71,666 ಮತಗಳನ್ನು ಪಡೆದರೆ ಬಿಜೆಪಿಯ ಸಂಜಯ್ ಪಾಟೀಲ್ 4,71,613 ಮತಗಳನ್ನು ಪಡೆದಿದ್ದಾರೆ. ಶಿವಸೇನಾ ಅಭ್ಯರ್ಥಿಗೆ 60,860 ಮತಗಳು ಮಾತ್ರ ಬಿದ್ದಿದ್ದವು. ಎನ್‌ಸಿಪಿ, ಕಾಂಗ್ರೆಸ್ ಬೆಂಬಲ ನೀಡಿದ್ದರೆ ಕನಿಷ್ಟ 3 ಲಕ್ಷ ಮತಗಳಾದರೂ ಬೀಳಬೇಕಿತ್ತು. ಆದರೆ ಇಷ್ಟೊಂದು ಕಡಿಮೆ ವೋಟ್ ಬಿದ್ದಿದ್ದಕ್ಕೆ ಉದ್ಧವ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಶಾಲ್ ಪ್ರಕಾಶ್ ಪಾಟೀಲ್ ಅವರು ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದರು. ಆದರೆ ಮೈತ್ರಿ ಭಾಗವಾಗಿರುವ ಕಾರಣ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ. ಆದರೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಹಿಂದುಗಡೆಯಿಂದ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಕ್ಕೆ ಉದ್ಧವ್ ಠಾಕ್ರೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿಂಧೆ ಬಣಕ್ಕೆ ಸೋಲಾಗಿದ್ದು ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನ ಗೆದ್ದುಕೊಂಡಿದೆ. ಒಟ್ಟು 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 9, ಶಿವಸೇನೆ (ಉದ್ಧವ್ ಠಾಕ್ರೆ) 9, ಎನ್‌ಸಿಪಿ( ಶರಾದ್ ಪವಾರ್) 8, ಶಿಂಧೆ(ಶಿವಸೇನೆ) 7 ಸ್ಥಾನವನ್ನು ಗೆದ್ದುಕೊಂಡಿದೆ. 2019 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿ 43 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಯುಪಿಎ ಮೈತ್ರಿ ಕೇವಲ 5 ಸ್ಥಾನ ಮಾತ್ರ ಗೆದ್ದುಕೊಂಡಿತ್ತು.
ಮುಂದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ಮೈತ್ರಿ ಅನಿವಾರ್ಯ. ಹೀಗಾಗಿ ಉದ್ಧವ್ ಠಾಕ್ರೆ ಮರಳಿ ಎನ್‌ಡಿಎ ಸೇರುತ್ತಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.