ಬೆಂಗಳೂರು: ಕೆಲವೊಂದು ಕಡೆ ಇವಿಎಂನಲ್ಲಿ (EVM) ಸಣ್ಣಪುಟ್ಟ ಸಮಸ್ಯೆ ಇತ್ತು. ಬೆಳಗ್ಗೆ 7 ಗಂಟೆಯ ಒಳಗಡೆ ಎಲ್ಲಾ ಸಮಸ್ಯೆ ಪರಿಹಾರ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಹೇಳಿದ್ದಾರೆ.
ಮತದಾನ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎಲ್ಲಾ ಕಡೆ ಯಾವುದೇ ಸಮಸ್ಯೆ ಇಲ್ಲದೇ ಮತದಾನ ಶುರುವಾಗಿದೆ. ಮತದಾನ ಹೆಚ್ಚಾಗಲು ಎಲ್ಲಾ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ದಾಳಿ ಕೇಸ್ – ಖಲಿಸ್ತಾನಿ ಪರ ಆರೋಪಿ ಬಂಧನ
ನಮಗೂ ಇದೊಂದು ಪರೀಕ್ಷೆ. ಈ ಬಾರಿ ಮತದಾನ ಹೆಚ್ಚಾಗುವ ನಿರೀಕ್ಷೆಯಿದೆ. ಬೆಂಗಳೂರು ಜನತೆ ಬಂದು ಮತ ಹಾಕಬೇಕು ಎಂದು ತುಷಾರ್ ಗಿರಿನಾಥ್ ಕೈ ಮುಗಿದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಉತ್ತಮ ಪತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಗ್ಗೆ ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ.