ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆಲುವಿನ ವಿಶ್ವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈಗಲೇ ಮುಂದಿನ ಸರ್ಕಾರದ ಕಾರ್ಯತಂತ್ರದತ್ತ ಗಮನ ಹರಿಸಿದ್ದಾರೆ. ಪಕ್ಷ ಗೆದ್ದರೆ ಮೊದಲ 100 ದಿನಗಳಲ್ಲಿ ಏನು ಮಾಡಬೇಕು ಎಂಬುದಕ್ಕೆ ಈಗಲೇ ಸಿದ್ಧತೆ ಆರಂಭಿಸುವಂತೆ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.
ಮಾರ್ಚ್ 3 ರಂದು ಸಂಪುಟ ದರ್ಜೆ, ರಾಜ್ಯ ದರ್ಜೆ ಸಚಿವರನ್ನು ಒಳಗೊಂಡ ಇಡೀ ಮಂತ್ರಿಮಂಡಲ ಸಭೆ (Cabinet Meeting) ಕರೆದಿರುವ ಮೋದಿ ಗೆದ್ದ ಮೇಲೆ ಮೊದಲ 100 ದಿನ ಏನು ಮಾಡಬೇಕೆಂಬುದರ ಬಗ್ಗೆ ಪ್ಲಾನ್ ತನ್ನಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಹೇಳಿದ್ದಾರೆ.
Advertisement
Advertisement
ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮೋದಿ ತಮ್ಮ ಸಚಿವರಿಗೆ ಮುಂದಿನ 100 ದಿನಗಳ ಕ್ರಿಯಾ ಯೋಜನೆ ಮತ್ತು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ತಜ್ಞರು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ರೂಪಿಸಬೇಕೆಂದು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ಜು.1 ರಿಂದ ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನುಗಳು ಜಾರಿ
Advertisement
ಚುನಾವಣೆಯ ನಂತರ ಯಾರಿಗೆ ಯಾವ ಸಚಿವ ಸ್ಥಾನಗಳು ಸಿಗುತ್ತವೆ ಎಂಬುದನ್ನು ಪರಿಗಣಿಸದೇ ಈ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಚುನಾವಣೆ ಘೋಷಣೆಯಾದರೂ ಅಭಿವೃದ್ಧಿ ಕೆಲಸ ಕುಂಠಿತವಾಬಾರದು. ಈಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿದರೆ ಮೂರನೇ ಅವಧಿ ಆರಂಭದಲ್ಲೇ ಘೋಷಣೆ ಮಾಡಿ ಜಾರಿಗೊಳಿಸಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ದೆಹಲಿಯಲ್ಲಿ ನಡೆದ ಬಿಜೆಪಿ (BJP) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಮೋದಿ, ಮೂರನೇ ಬಾರಿಗೆ ಅಧಿಕಾರ ನಡೆಸಲು ಉದ್ದೇಶಿಸಿರುವುದು ಅಧಿಕಾರದ ಸುಖಕ್ಕಾಗಿ ಅಲ್ಲ, ದೇಶಕ್ಕೆ ತಮ್ಮ ಸೇವೆಯನ್ನು ಮುಂದುವರಿಸಲು ಪ್ರೇರಣೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ?
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪ್ರಸ್ತುತ ಚುನಾವಣಾ ಪ್ರಕ್ರಿಯೆಗಾಗಿ ವಿವಿಧ ರಾಜ್ಯಗಳ ಸಿದ್ಧತೆಯನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದ್ದು, ಮಾರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.