ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಸಂಬಂಧ ಎನ್‍ಡಿಎ ಮೈತ್ರಿಕೂಟದ (NDA Alliance) ಸಭೆ ಮಂಗಳವಾರ ನಡೆಯಲಿದ್ದು, ಈ ಸಭೆಯಲ್ಲಿ ಜೆಡಿಎಸ್ (JDS) ಭಾಗಿಯಾಗಲಿದ್ಯಾ ಇಲ್ವಾ ಎಂಬ ಪ್ರಶ್ನೆಗೆ ಈ ಕ್ಷಣದವರೆಗೂ ನಿರ್ದಿಷ್ಟ ಉತ್ತರ ಸಿಕ್ಕಿಲ್ಲ.
ಬೆಂಗಳೂರಿನಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಎನ್‍ಡಿಎ ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ (UPA) ಸಭೆಗೂ ಆಹ್ವಾನ ಬಂದಿಲ್ಲ. ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗುವುದಿಲ್ಲ. ಆದರೆ ಎನ್‍ಡಿಎ ಸಭೆಗೆ ಆಹ್ವಾನ ಬಂದರೆ ಭಾಗಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.
Advertisement
ಮೂಲಗಳ ಪ್ರಕಾರ ಎನ್‍ಡಿಎ ಸಭೆಯಲ್ಲಿ ಜೆಡಿಎಸ್ ಭಾಗಿಯಾಗುವುದು ಬಹುತೇಕ ಅನುಮಾನ. ಮೈತ್ರಿ ಸಂಬಂಧ ಕೆಲವೊಂದಿಷ್ಟು ವಿಚಾರಗಳಲ್ಲಿ ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ. ಒಂದಿಷ್ಟು ಗೊಂದಲಗಳು, ಅನುಮಾನಗಳು ಬಗೆಹರಿದ ನಂತರ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ನಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ವಿರೋಧಿಗಳ ರಣಕಹಳೆ – ಯಾವೆಲ್ಲ ಪಕ್ಷಗಳು ಭಾಗಿ ಆಗುತ್ತಿವೆ?
Advertisement
Advertisement
ಬಿಜೆಪಿ ಪ್ಲಾನ್ ಏನು?
ಲೋಕಸಮರದಲ್ಲಿ ತ್ರಿಕೋನ ಸ್ಪರ್ಧೆಯಾದರೆ ಕಾಂಗ್ರೆಸ್‍ಗೆ ಲಾಭವಾಗುವ ಸಾಧ್ಯತೆಯಿದೆ. ಜೆಡಿಎಸ್ ಜೊತೆ ಹೋದಲ್ಲಿ ಬಿಜೆಪಿಗೆ ಲಾಭವಾಗಬಹುದು. ಒಂಟಿ ಹೋರಾಟಕ್ಕಿಂತಲೂ ಜಂಟಿ ಹೋರಾಟಕ್ಕೆ ಒಲವು ವ್ಯಕ್ತವಾಗಿದೆ. ಗ್ಯಾರಂಟಿಗಳ ಬಲ ಕುಗ್ಗಿಸಲು ಜೆಡಿಎಸ್ ಸ್ನೇಹ ಈಗ ಅಗತ್ಯವಾಗಿದೆ. ಮಾಸ್ ಲೀಡರ್‌ಶಿಪ್ ಕೊರತೆ ತುಂಬಲು ಕುಮಾರಸ್ವಾಮಿ (Kumaraswamy) ಅನಿವಾರ್ಯವಾಗಿದ್ದು, ಜೆಡಿಎಸ್ ಜೊತೆಯಾದಲ್ಲಿ ಬಿಜೆಪಿ 22+ ಕ್ಷೇತ್ರ ಗೆಲ್ಲಬಹುದು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಬ್ಯಾಂಕ್ ಸೆಳೆಯಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
Advertisement
ಜೆಡಿಎಸ್ ಪ್ಲಾನ್ ಏನು?
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಏಕಾಂಗಿ ಸೆಣೆಸಾಟ ಕಷ್ಟಸಾಧ್ಯ. ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಹೋದರೆ ಉತ್ತಮ. ಹಳೇ ಮೈಸೂರಿನ 8 ಸಂಸತ್ ಕ್ಷೇತ್ರಗಳಿಗೆ ಹೆಚ್‍ಡಿಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು(ಗ್ರಾ), ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಾಮರಾಜನಗರ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ರಾಷ್ಟ್ರ ರಾಜಕೀಯದಲ್ಲಿ ಸದ್ದು ಮಾಡಿ ಪಕ್ಷದ ಅಸ್ತಿತ್ವ ಗಟ್ಟಿಗೊಳಿಸಲು, ವಿಸ್ತರಿಸಲು ತಂತ್ರ ಮಾಡಿದೆ.
Web Stories