ಮತಗಟ್ಟೆ ದತ್ತಾಂಶ ಅಪ್ಲೋಡ್ ಮಾಡುವುದು ಕಷ್ಟ – ಸುಪ್ರೀಂ ಕೋರ್ಟ್‌

Public TV
2 Min Read

ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಸಂದರ್ಭದಲ್ಲಿ ಚುನಾವಣಾ ಆಯೋಗವು (Election Commission) ತನ್ನ ವೆಬ್‌ಸೈಟ್‌ನಲ್ಲಿ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ಅಪ್‌ಲೋಡ್ ಮಾಡಲು ನಿರ್ದೇಶನಗಳನ್ನು ನೀಡುವಂತೆ ಕೋರಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.

ಚುನಾವಣಾ ಸಮಿತಿಗೆ ದೊಡ್ಡ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಸಜ್ಜುಗೊಳಿಸಲು ಕಷ್ಟವಾಗುತ್ತದೆ. ಐದು ಹಂತದ ಮತದಾನ (Vote) ಮುಕ್ತಾಯವಾಗಿದ್ದು, ಎರಡು ಹಂತಗಳು ಬಾಕಿಯಿರುವುದರಿಂದ ಸದ್ಯಕ್ಕೆ ಅಂತಹ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾ. ದೀಪಂಕರ್ ದತ್ತಾ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ:   ಬುರ್ಖಾಧಾರಿ ಮಹಿಳಾ ಮತದಾರರ ವಿಶೇಷ ತಪಾಸಣೆಗೆ ಒತ್ತಾಯ – ಬಿಜೆಪಿ ಮನವಿಗೆ ಓವೈಸಿ ಕೆಂಡಾಮಂಡಲ

Election vote 1 2

ಪ್ರತಿ ಹಂತದ ಲೋಕಸಭೆ ಚುನಾವಣೆ ಮತದಾನ ಮುಕ್ತಾಯದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎಡಿಆರ್‌ ಸಲ್ಲಿಸಿದ ಮನವಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್ ಜಾರಿ ಮಾಡಿತ್ತು.

ಅಫಿಡವಿಟ್‌ ಸಲ್ಲಿಸಿದ್ದ ಆಯೋಗ:
ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮತಗಟ್ಟೆವಾರು ಮತದಾನ ಪ್ರಮಾಣವನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಅದು ಗೊಂದಲ ಸ್ಥಿತಿಯನ್ನು ನಿರ್ಮಾಣವಾಗಬಹುದು ಎಂದು ಹೇಳಿದ ಆಯೋಗ ಗುರುವಾರ 225 ಪುಟಗಳ ಅಫಿಡವಿಟ್ ಸಲ್ಲಿಸಿತ್ತು. ಇದನ್ನೂ ಓದಿ: ಕಾಂಬೋಡಿಯಾದಲ್ಲಿ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರ ರಕ್ಷಣೆ

ಪ್ರತಿ ಮತಗಟ್ಟೆಯಲ್ಲಿ ಬಿದ್ದ ಮತಗಳ ಸಂಖ್ಯೆಯನ್ನು ತಿಳಿಸುವ ಫಾರಂ 17ಸಿ ಪತ್ರವನ್ನು ಬಹಿರಂಗ ಮಾಡುವಂತೆ ಎಲ್ಲಿಯೂ ನಿಯಮಗಳಿಲ್ಲ. ಸದ್ಯ ಈ 17ಸಿ ಮೂಲ ಫಾರಂಗಳನ್ನು ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಕೇವಲ ಮತಗಟ್ಟೆ ಏಜೆಂಟ್‌ಗೆ ಇದರ ಕಾಪಿಯನ್ನು ಪಡೆಯಲು ಅನುಮತಿ ಇದೆ. ಅರ್ಜಿದಾರ ಕೋರಿದಂತೆ ಮತಗಟ್ಟೆವಾರು ಪೋಲಿಂಗ್ ಪ್ರಮಾಣವನ್ನು ಬಹಿರಂಗಪಡಿಸಿದರೆ ಅದು ದುರ್ಬಳಕೆಯಾಗುವ ಸಂಭವ ಇದೆ. ದತ್ತಾಂಶವನ್ನು ತಿರುಚುವ ಸಂಭವ ಇದೆ. ಇದರಿಂದ ಗೊಂದಲ ಉಂಟಾಗಿ ಇಡೀ ಚುನಾವಣೆ ಪ್ರಕ್ರಿಯೆ ಮೇಲೆ ಜನರಲ್ಲಿ ಅಪನಂಬಿಕೆ ಮೂಡಬಹದು ಎಂಬ ಆತಂಕವನ್ನು ಆಯೋಗ ವ್ಯಕ್ತಪಡಿಸಿತ್ತು.

 

Share This Article