ಡಿಕ್ಕಿ ಬಳಿಕ ಹೊತ್ತಿ ಉರಿದ ಇಂಜಿನ್ – ಮೂವರು ಸಿಬ್ಬಂದಿಗೆ ಗಾಯ
ರಾಂಚಿ: ಜಾರ್ಖಂಡ್‌ನ (Jharkhand) ಸಾಹಿಬ್‌ಗಂಜ್‌ನಲ್ಲಿ ಎರಡು ಗೂಡ್ಸ್ ರೈಲುಗಳ (Train) ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಲೋಕೋ ಪೈಲಟ್ (Loco Pilot) ಸೇರಿದಂತೆ ಮೂವರು ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ಅಪಘಾತದ ಬಳಿಕ ರೈಲಿನ ಎಂಜಿನ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಮೂವರ ಸಾವಾಗಿದೆ. ಅವಘಡದಲ್ಲಿ ಮೂವರು ಸಿಐಎಸ್‌ಎಫ್ (Central Industrial Security Force) ಸಿಬ್ಬಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಹಳಿಯಲ್ಲಿದ್ದ ಕಸ ತೆರವುಗೊಳಿಸುತ್ತಿದ್ದ ವೇಳೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ – ನಾಲ್ವರು ಗುತ್ತಿಗೆ ಕಾರ್ಮಿಕರ ದುರ್ಮರಣ
ಬೆಳಗಿನ ಜಾವ 3:30ರ ಸುಮಾರಿಗೆ ಈ ಅಪಘಾತ ನಡೆದಿದೆ. ಫರಕ್ಕಾದಿಂದ ಲಾಲ್ಮಾಟಿಯಾಗೆ ಗೂಡ್ಸ್ ರೈಲು ಬರ್ಹೆತ್‌ನಲ್ಲಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.
ಕಲ್ಲಿದ್ದಲು ತುಂಬಿದ್ದ ಹಿನ್ನಲೆ ವೇಗವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು 11 ಮಂದಿ ಸಾವು – ಅವಘಡ ಹೇಗಾಯ್ತು?