ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಎಲ್ಕೆಜಿ-ಯುಕೆಜಿ ತರಗತಿಗಳ ಜೊತೆಗೆ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗಿದೆ.
Advertisement
ಕಳೆದ ಎರಡು ವರ್ಷಗಳಿಂದ ಕೊರೊನಾ ಆತಂಕದ ಹಿನ್ನೆಲೆ ತರಗತಿಗಳನ್ನು ಮುಚ್ಚಲಾಗಿತ್ತು. ಇದೀಗ ಕೊರೊನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ
Advertisement
Advertisement
ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಎಲ್ಕೆಜಿ-ಯುಕೆಜಿ ಅಂಗನವಾಡಿ ಪ್ರಾರಂಭಿಸಲು ಸಂಪೂರ್ಣ ಸಿದ್ದಗೊಳಿಸಿದೆ. ಕೊರೊನಾ ನಿಯಮಗಳ ಅಡಿ ತರಗತಿಗಳನ್ನು ನಡೆಸಲು ಸರ್ಕಾರ ಆದೇಶ ನೀಡಿದೆ. ಪೂರ್ವ ಪ್ರಾಥಮಿಕ ತರಗತಿಗಳು ತೆರೆಯುವುದಕ್ಕೆ ಶಿಕ್ಷಣ ಇಲಾಖೆ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಕಡ್ಡಾಯವಾಗಿ ಕೊರೊನಾ ನಿಯಮ ಪಾಲಿಸುವಂತೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ಉಗ್ರಗಾಮಿಗಳ ಗುಂಡಿಗೆ ಪೊಲೀಸ್ ಸಿಬ್ಬಂದಿ ಹುತಾತ್ಮ
Advertisement
ಎಲ್ಕೆಜಿ-ಯುಕೆಜಿ ಪ್ರಾರಂಭಕ್ಕೆ ಮಾರ್ಗಸೂಚಿಗಳು:
* ಶಾಲೆಗೆ ಆಗಮಿಸೋ ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು.
* ನಿತ್ಯ ಅರ್ಧ ದಿನ ಮಾತ್ರ ತರಗತಿಗಳನ್ನು ನಡೆಸಬೇಕು.
* ಸೋಮವಾರದಿಂದ ಶುಕ್ರವಾರದ ಒಳಗೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 3.30 ವರೆಗೆ ತರಗತಿ ನಡೆಸಬೇಕು.
* 2% ಒಳಗೆ ಕೊರೊನಾ ಕೇಸ್ ಇರುವ ತಾಲೂಕುಗಳಲ್ಲಿ ಮಾತ್ರ ತರಗತಿ ಪ್ರಾರಂಭ ಮಾಡಬೇಕು.
* ವಿದ್ಯಾರ್ಥಿಗಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು.
* ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.
* ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು.
* ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು.
* ಮನೆಯಿಂದಲೇ ಮಕ್ಕಳು ಉಪಹಾರ ಮತ್ತು ಕುಡಿಯುವ ನೀರು ತರಲು ಅವಕಾಶ ಕೊಡಬೇಕು.
* ಶಾಲೆಗಳಲ್ಲಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
* ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಕುಟುಂಬದವರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶ ನೀಡಬಾರದು.
* ಶಾಲಾ ಆವರಣ ಮತ್ತು ಶಾಲೆಯ ಒಳಗೆ ವಿದ್ಯಾರ್ಥಿಗಳನ್ನ ಕೂರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯ ಕ್ರಮವಹಿಸಬೇಕು.
* ವಿದ್ಯಾರ್ಥಿಯ ಆರೋಗ್ಯದ ಮೇಲೆ ನಿತ್ಯ ಶಾಲೆಯವರು ನಿಗಾ ಇಡಬೇಕು.
* ವಿದ್ಯಾರ್ಥಿಗೆ ಸೋಂಕು ಬಂದ ಕೂಡಲೇ ಶಾಲೆ ಕ್ಲೋಸ್ ಮಾಡಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ತಪಾಸಣೆ ನಡೆಸಬೇಕು.
* ಸಂದರ್ಶಕರು ಅಥವಾ ಮೂರನೇ ವ್ಯಕ್ತಿಗಳಿಗೆ ಶಾಲೆಗೆ ಪ್ರವೇಶ ನೀಡಬಾರದು.
* ಸೋಂಕು ಕಂಡು ಬಂದ ಶಾಲೆ ಕ್ಲೋಸ್ ಮಾಡಿಸಿ ಬಳಿಕ ಸ್ಥಳೀಯ ಆರೋಗ್ಯ ಅಧಿಕಾರಿಗಳ ಸೂಚನೆ ಮೇರೆಗೆ ಕೊಠಡಿ ಸಂಪೂರ್ಣ ಸ್ಯಾನಿಟೈಸ್ ಮಾಡಿ ಮತ್ತೆ ಪ್ರಾರಂಭ ಮಾಡಬೇಕು.