ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಇರುವುದರಿಂದ ಅಭಿಮಾನಿಗಳಿಗೆ ಮಧ್ಯಾಹ್ನದವರೆಗೂ ಅಪ್ಪು ಸಮಾಧಿ ನಿರ್ಬಂಧ ಹೇರಲಾಗಿದೆ.
ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಇಂದು ಪುನೀತ್ 11ನೇ ದಿನ ಪುಣ್ಯಸ್ಮರಣೆಯಾಗಿದ್ದು, ಸದಾಶಿವನಗರದ ಅಪ್ಪು ನಿವಾಸದ ಪುನೀತ್ ಫೋಟೋಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ
ಪುನೀತ್ 11ನೇ ದಿನದ ಪುಣ್ಯಾರಾಧನೆಯ ವಿಧಿವಿಧಾನವನ್ನು ವಿನಯ್ ರಾಜ್ಕುಮಾರ್ ನೆರವೇರಿಸಲಿದ್ದು, 11 ಗಂಟೆ ಬಳಿಕ ಅಪ್ಪು ಸಮಾಧಿಗೆ ಎಡೆ ಅರ್ಪಣೆ ಮಾಡಲಾಗುತ್ತದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರಷ್ಟೇ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ
ಮಧ್ಯಾಹ್ನ 12 ಗಂಟೆವರೆಗೆ ಅಭಿಮಾನಿಗಳಿಗೆ ಸಮಾಧಿ ದರ್ಶನವನ್ನು ನಿಷೇಧಿಸಲಾಗಿದ್ದು, ಕಂಠೀರವ ಸ್ಟುಡಿಯೋ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾದ