ನವದೆಹಲಿ: 2021ರ ನವಂಬರ್ 17ರಲ್ಲಿ ಜಾರಿಗೆ ಬಂದ ಹೊಸ ಅಬಕಾರಿ ನೀತಿಯನ್ನು ರದ್ದುಗೊಳಿಸಿ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ದೆಹಲಿಯ ಅಬಕಾರಿ ಇಲಾಖೆಯು ಹಲವು ಬದಲಾವಣೆಗಳನ್ನು ತರಲು ಮುಂದಾಗಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ 500 ಮದ್ಯದಂಗಡಿಗಳು ಹಾಗೂ 2022ರ ವರ್ಷಾಂತ್ಯದ ವೇಳೆಗೆ ಇನ್ನೂ 200 ಅಂಗಡಿಗಳು ಸೇರಿ 700 ಮದ್ಯದಂಗಡಿಗಳು ತಲೆ ಎತ್ತಲಿವೆ ಎಂದು ದೆಹಲಿ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ರಿಷಿಗೆ ಸೋಲು – ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ ಲಿಜ್ ಟ್ರಸ್
Advertisement
Advertisement
ಇದರ ಭಾಗವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಕರೋಲ್ ಬಾಗ್, ರಾಜೌರಿ ಗಾರ್ಡನ್, ದ್ವಾರಕಾ, ಮುಂಡ್ಕಾ, ಶಿವಾಜಿ ಪಾರ್ಕ್, ಸುಲ್ತಾನ್ಪುರಿ, ಸುಭಾಷ್ ನಗರ ಮತ್ತು ಬಾದರ್ಪುರದ ಮೆಟ್ರೋ ನಿಲ್ದಾಣಗಳಲ್ಲಿ ಮದ್ಯ ಮಾರಾಟ ಮಾಡಲು ಅಂಗಡಿಗಳನ್ನು ತೆರೆಯಲಾಗಿದ್ದು, ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ: ಮನೀಶ್ ಸಿಸೋಡಿಯಾ
Advertisement
Advertisement
ಕಳೆದ ನವೆಂಬರ್ನಲ್ಲಿ ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಿ 849 ಮದ್ಯದಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಮತ್ತೆ ಹಳೆಯ ನೀತಿಯನ್ನೇ ಅನುಷ್ಠಾನಗೊಳಿಸಿದ ನಂತರ ಸುಮಾರು 65 ಮದ್ಯದಂಗಡಿಗಳು ಮುಚ್ಚಿದವು. ಇದರಿಂದ ಅಬಕಾರಿ ಇಲಾಖೆ ಆರ್ಥಿಕ ಕ್ರೋಢಿಕರಣಕ್ಕೆ ಸವಾಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ಹೊಸ ನೀತಿಯನ್ನು ರದ್ದುಮಾಡಿ, ಮತ್ತೆ ಹಳೆ ನೀತಿಯಂತೆ ಮುಂದುವರಿಸುತ್ತಿದ್ದು, ಸರ್ಕಾರದಿಂದಲೇ ಮದ್ಯದಂಗಡಿಗಳನ್ನು ತೆರೆಯುವ ಕ್ರಮಕ್ಕೆ ಇಲಾಖೆ ಮುಂದಾಗಿದೆ.