– ಕುಮಾರಸ್ವಾಮಿ ಮುಗಿದೇ ಹೋದ ಅನ್ನುವಾಗಲೇ ಒಂದು ಶಕ್ತಿ ಕಾಪಾಡಿದೆ ಎಂದ ಸಚಿವ
ನವದೆಹಲಿ: ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ನನ್ನ ಮೇಲೆ ಸವಾಲಿದೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವತ್ತ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
Advertisement
ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದಾರೆ. ವಿಶ್ವಾಸ ಇಟ್ಟು ಖಾತೆ ಹಂಚಿಕೆ ಮಾಡಿದ್ದಾರೆ. ಪ್ರಹ್ಲಾದ್ ಜೋಶಿಯವರಿಗೆ ಆಹಾರ ಖಾತೆ ಕೊಟ್ಟಿದ್ದಾರೆ. ನನಗೆ ದೊಡ್ಡ, ಪ್ರಮುಖವಾದ ಇಲಾಖೆ ನೀಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ನಿರೀಕ್ಷೆ ಮಾಡಿ ಖಾತೆ ನೀಡಿದ್ದಾರೆ. ಕನ್ನಡಿಗರ ಪರವಾಗಿ ಪ್ರಧಾನಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮೋದಿಗೆ ಬಾಹ್ಯಾಕಾಶ, ಅಮಿತ್ ಶಾಗೆ ಗೃಹ ಖಾತೆ – ಜೆ.ಪಿ ನಡ್ಡಾಗೆ ಆರೋಗ್ಯ ಖಾತೆ ಗಿಫ್ಟ್
Advertisement
Advertisement
ಕರ್ನಾಟಕಕ್ಕೆ ಅಂತ ಮಾತ್ರ ಹೇಳಲ್ಲ. ದೇಶಾದ್ಯಂತ ಸುತ್ತಾಡಿ, ಬದಲಾವಣೆ ತರಬೇಕು ಎಂದು ಬಯಸಿದ್ದೇನೆ. ನನ್ನ ಜೀವನದಲ್ಲಿ ಅತಿ ದೊಡ್ಡ ಸವಾಲು ಇದು. ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳು ಇವೆ. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ. ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ (Narendra Modi) ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಕ್ಷಣ ವ್ಯರ್ಥ ಮಾಡದೇ ಕೆಲಸ ಮಾಡುತ್ತೇನೆ. ರೂಟ್‌ಮ್ಯಾಪ್ ಸಿದ್ಧಮಾಡಿ ಕೆಲಸ ಮಾಡುತ್ತೇನೆ. ನನ್ನದೇ ಕಲ್ಪನೆಯಲ್ಲಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಜೈಲಿನಲ್ಲಿರೋ ಹೇಮಂತ್ ಸೊರೆನ್ ಪತ್ನಿ ಜಾರ್ಖಂಡ್ MLA ಆಗಿ ಪ್ರಮಾಣವಚನ ಸ್ವೀಕಾರ!
Advertisement
ಶೋಭಾ ಅವರಿಗೂ ಉತ್ತಮ ಖಾತೆ ಸಿಕ್ಕಿದೆ. ದೇಶದ ಪ್ರಗತಿಗೆ ನಾವು ಕೆಲಸ ಮಾಡುತ್ತೇವೆ. ಹೊಸ ಇತಿಹಾಸ ಕರ್ನಾಟಕದಲ್ಲಿ ತರುವುದು ಮಾತ್ರವಲ್ಲ, ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇವೆ. ಕೃಷಿ ಖಾತೆ ನಿರೀಕ್ಷೆ ಇತ್ತು, ಆದರೆ ಮೋದಿ ತೀರ್ಮಾನ ಮಾಡಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಕೆಲಸ ಮಾಡಬೇಕಿದೆ. ಎಲ್ಲದರ ಬಗ್ಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್
ಜೆಡಿಎಸ್ ಪಕ್ಷ ಏಳು-ಬೀಳುಗಳನ್ನು ಕಂಡಿದೆ. ದೇವೇಗೌಡರನ್ನು ಇಂದು ಸ್ಮರಿಸುತ್ತೇನೆ. ದೇವೇಗೌಡರ ರಾಜಕೀಯ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದಿದ್ದಾರೆ. ಕುಮಾರಸ್ವಾಮಿ ಮುಗಿದು ಹೋದ ಎನ್ನುವಾಗಲೇ ಯಾವುದೋ ಶಕ್ತಿ ಕಾಪಾಡಿದೆ. ಈ ಪಕ್ಷವನ್ನು ಯಾವುದೋ ಶಕ್ತಿ ಮೇಲೆತ್ತಿದೆ. ಪಕ್ಷದ ಸಂಘಟನೆ ಮಾಡುವ ಸಮರ್ಥ ನಾಯಕರು ರಾಜ್ಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Modi cabinet: ಕರ್ನಾಟಕದ ನಾಲ್ವರು ಸಚಿವರಿಗೆ ಬಂಪರ್ – ಯಾರಿಗೆ ಯಾವ ಖಾತೆ?