ಕಲಬುರಗಿ: ತನ್ನ ಲೆಟರ್‌ಹೆಡ್ (Letter Head) ಇರುವ ಪತ್ರ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (B.R.Patil) ಕಲಬುರಗಿ (Kalaburagi) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು (Complaint) ನೀಡಿದ್ದಾರೆ.
ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ನಕಲಿ ಪತ್ರ ಸೃಷ್ಟಿ ಮಾಡಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಚಿವರ ವಿರುದ್ಧ ಬೇಸರಗೊಂಡ್ರಾ ಶಾಸಕರು? – ಕಾಂಗ್ರೆಸ್ ಶಾಸಕರ ಆರೋಪ ಏನು?
Advertisement
Advertisement
ದೂರಿನಲ್ಲಿ ಏನಿದೆ?
ನನ್ನ ಹೆಸರಿನ ಹಳೆ ಲೆಟರ್ ಹೆಡ್ ಅನ್ನು ಉಪಯೋಗಿಸಿ ಇಲ್ಲಸಲ್ಲದ ವಿಷಯವನ್ನು ಪ್ರಸ್ತಾಪ ಮಾಡಿ ನನ್ನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ದ್ವೇಷ ಹುಟ್ಟಿಸಿ ಅದರ ರಾಜಕೀಯ ಲಾಭ ಪಡೆಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಆ ಪತ್ರದಲ್ಲಿ ಸಹಿ ಮಾಡಿದ್ದು ನನ್ನ ಹಸ್ತಕ್ಷರದ ಪ್ರತಿಯನ್ನು ಪೇಸ್ಟ್ ಮಾಡಿದ್ದಾರೆ. ಮತ್ತು ನನ್ನ ಲೆಟರ್ ಹೆಡ್ ಕಳೆದ ಬಾರಿ ಶಾಸಕನಾಗಿದ್ದಾಗ ನಾನು ಕಲಬುರಗಿ ಶಾಂತಿ ನಗರದಲ್ಲಿರುವ ಹಳೆ ವಿಳಾಸ ಕಲರ್ ಜೆರಾಕ್ಸ್ ಆ ಪತ್ರದಲ್ಲಿ ಸಹಿ ತೆಗೆದು ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈಗ ಕಳೆದ 4 ವರ್ಷಗಳಿಂದ ನಾನು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದು, ಈಗ ಬಳಸುವ ಲೇಟರ್ ಹೆಡ್‌ನಲ್ಲಿ ಹೊಸ ವಿಳಾಸವಿದೆ.
Advertisement
Advertisement
ಈ ಪತ್ರದಲ್ಲಿ ಅನುದಾನ ಬಿಡುಗಡೆ ಮಾಡುವುದಕ್ಕೂ ಸಚಿವರು 3ನೇ ವ್ಯಕ್ತಿ ಮೂಲಕ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಸ್ಥಳಿಯ ಶಾಸಕರು ನಾವು ಆಗಿದ್ದರೂ ಅನುದಾನಕ್ಕಾಗಿ 3ನೇ ವ್ಯಕ್ತಿಯ ಮೊರೆ ಹೊಗಬೇಕಾಗಿದೆ ಎಂಬ ಆರೋಪ ಹೊರಿಸಿ ಈ ತರಹ ಸುಳ್ಳು ಸುದ್ಧಿಯನ್ನು ಸೃಷ್ಟಿಸಿ ಮಾಧ್ಯಮಗಳಲ್ಲಿ ಹರಿಬಿಟ್ಟಿರುವದು ತನಿಖೆಯಾಗಬೇಕು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಯಲಿಗೆ ತರಬೇಕು. ಅಂತವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಷಡ್ಯಂತ್ರ: ದಿನೇಶ್ ಗುಂಡೂರಾವ್
Web Stories