ಬೆಂಗಳೂರು: ಮಾಜಿ ಸಂಸದೆ ಹಾಗೂ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್ ವಾರ್ ಮುಂದುವರೆಸಿದ್ದಾರೆ.
ಭಾನುವಾರವಷ್ಟೇ ಮೋದಿ ಭಾಷಣವನ್ನ ವ್ಯಂಗ್ಯ ಮಾಡಿದ್ದ ರಮ್ಯಾ ಇಂದು ಮತ್ತೆ ಮೋದಿ ಅವರೇ, ‘ದೋಖಾ’ಲಾಂ (ಡೋಕ್ಲಾಂ) ಬಗ್ಗೆ ಮಾತನಾಡೋಣ ಎಂದು ಬರೆದಿದ್ದಾರೆ. ಮೋದಿ ಪ್ರಧಾನಿಯಾಗುವುದಕ್ಕೂ ಮುಂಚೆ 2013ರಲ್ಲಿ ಯುಪಿಎ ಸರ್ಕಾರದ ವಿರುದ್ಧ ಮಾಡಿದ್ದ ಟ್ವೀಟ್‍ನ ಸ್ಕ್ರೀನ್‍ಶಾಟ್ ಬಳಸಿ ಯುಪಿಎ ಬದಲಿಗೆ ಎನ್‍ಡಿಎ ಎಂದು ತಿದ್ದಿ ಚಿತ್ರವನ್ನ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ಭಾಷಣವನ್ನ ಮೂರು ಅಕ್ಷರಗಳಲ್ಲಿ ಟೀಕಿಸಿದ ರಮ್ಯಾ
Advertisement
ಮೋದಿ ಟ್ವೀಟ್‍ನಲ್ಲಿ ಏನಿತ್ತು?: ಚೀನಾದ ಒಳನುಸುಳುವಿಕೆಯಿಂದ ಹಿಡಿದು ಪಾಕಿಸ್ತಾನದ ದಾಳಿಗಳವರೆಗೆ – ಯುಪಿಎ ಸರ್ಕಾರ ಭಾರತದ ಗಡಿಯನ್ನು ಭದ್ರಪಡಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಹೊಂದಿದೆ. ಕೇಂದ್ರ ಎಚ್ಚೆತ್ತುಕೊಳ್ಳುವುದು ಯಾವಾಗ? ಎಂದು 2013ರ ಆಗಸ್ಟ್ 6ರಂದು ಮೋದಿ ಟ್ವೀಟ್ ಮಾಡಿದ್ದರು.
Advertisement
ಇದೇ ಟ್ವೀಟ್ ಬಳಸಿ ಯುಪಿಎ ಬದಲಿಗೆ ಎನ್‍ಡಿಎ ಎಂದು ಹಾಕಿ ಮೋದಿ ಅವರೇ ಡೋಕ್ಲಾಂ ಬಗ್ಗೆ ಮಾತನಾಡೋಣ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ‘ದೋಖಾ’ಲಾಂ (ದೋಖಾ= ವಂಚನೆ) ಹ್ಯಾಶ್ ಟ್ಯಾಗ್ ಬಳಸಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧದ ರಮ್ಯಾ ಟ್ವೀಟ್ ಗೆ ಶಾಸಕ ಜಮೀರ್ ಅಹಮದ್ ಅಸಮಾಧಾನ!
Advertisement
Modi avare let’s talk #Dhokalam pic.twitter.com/cZejwTL5V2
— Ramya/Divya Spandana (@divyaspandana) February 5, 2018
Advertisement
ಟಿಬೆಟ್‍ನಲ್ಲಿ ಚೀನಾದ ಸೇನಾ ಉಪಸ್ಥಿತಿ ಹೆಚ್ಚಾಗಿರುವ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಪ್ರಸಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.
ಇದೇ ವರ್ಷ ಜನವರಿಯಲ್ಲಿ ಗುಪ್ತಚರ ಮೂಲಗಳು ತಿಳಿಸಿರುವ ಪ್ರಕಾರ ಟಿಬೆಟ್‍ನಲ್ಲಿ ಚೀನಾದ ಫೈಟರ್ ಜೆಟ್‍ಗಳ ಸಂಖ್ಯೆ ಕಳೆದ ಮೂರು ವಾರಗಳಲ್ಲಿ 47 ರಿಂದ 51 ಇವೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಫೈಟರ್ ಜೆಟ್‍ಗಳ ಸಂಖ್ಯೆ ಸುಮಾರು 10 ಹೆಚ್ಚಾಗಿದೆ ಎಂದು ವರದಿ ಪ್ರಸಾರ ಮಾಡಿದೆ. ಈ ಹಿನ್ನೆಲೆಯಲ್ಲಿ ರಮ್ಯಾ ಮೋದಿಯ ಈ ಹಿಂದಿನ ಟ್ವೀಟನ್ನೇ ಬಳಸಿ ಕೇಂದ್ರಕ್ಕೆ ಡೋಕ್ಲಾಂ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಈಕೆ ಯಾರು? ಸಾಧನೆ ಏನು? ಕನ್ನಡ ಬಾರದ ಕಾಡುಪಾಪ- ಮೋದಿ ಕಾಲೆಳೆದ ರಮ್ಯಾ ವಿರುದ್ಧ ಜಗ್ಗೇಶ್ ಕಿಡಿ