ಉಡುಪಿ: ಪರೇಶ್ ಮೇಸ್ತಾ (Paresh Mesta) ಸಾವು ಪ್ರಕರಣ ರೀ ಓಪನ್ ಆಗಲಿ. ಆತನದ್ದು ಕೊಲೆಯಲ್ಲ ಸಹಜ ಸಾವು ಎಂದು ಸಿಬಿಐ (CBI) ಮೋಸದ ವರದಿ ಮಾಡಿದೆ ಎಂದು ವಿಶ್ವ ಹಿಂದೂ ಪರಿಷತ್ ಶ್ರೀರಾಮ ಸೇನೆ (Sri Ram Sena) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಅಸಮಾಧಾನ ಹೊರಹಾಕಿದ್ದಾರೆ.
2017ರಲ್ಲಿ ಪರೇಶ್ ಮೇಸ್ತಾ ಹತ್ಯೆ ಆಯಿತು. ಇಡೀ ರಾಜ್ಯಾದ್ಯಂತ ಹಿಂದೂಗಳ ಆಕ್ರೋಶ, ಪ್ರತಿಭಟನೆ ವ್ಯಕ್ತವಾಯಿತು. ಗೃಹ ಸಚಿವ ಅಮಿತ್ ಶಾ (Amit Shah) ಅವರು ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿದ್ದರು. ಇಂತಹ ಗಂಭೀರ ಪ್ರಕರಣವಾದಾಗ ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿದ್ದರು. ಪ್ರಕರಣವನ್ನು 2019ರಲ್ಲಿ ಸಿಬಿಐಗೆ ಒಪ್ಪಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ
ಮೂರು ವರ್ಷದ ನಂತರ ಸಿಬಿಐ ʻಬಿʼ ರಿಪೋರ್ಟ್ ಹಾಕಿದೆ. ಸಹಜ ಸಾವು ಎಂದಿರುವುದು ತಪ್ಪು. ಇದು ಅನ್ಯಾಯ. ನಾನು ಇದನ್ನು ಧಿಕ್ಕರಿಸುತ್ತೇನೆ. ಇದು ಅತ್ಯಂತ ಮೋಸ ಮಾಡಿದ ವರದಿ. ಪರೇಶ್ ಮೇಸ್ತಾನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದೆ. ಈಗಿನ ಕೇಂದ್ರ ಸರ್ಕಾರ ಕೇಸ್ ಅನ್ನು ರೀ ಓಪನ್ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಬೇಕು. ರಾಜ್ಯಾದ್ಯಂತ ಶ್ರೀರಾಮ ಸೇನೆ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ
ಇದು ಹಿಂದುತ್ವಕ್ಕೆ ಮತ್ತು ಮೇಸ್ತಾ ಕುಟುಂಬಕ್ಕೆ ಅನ್ಯಾಯ ಮಾಡಿದ ವರದಿ. ತಪ್ಪಿತಸ್ಥ ಮುಸ್ಲಿಂ ಗೂಂಡಾ, ಕಿಡಿಗೇಡಿಗಳ ಬಂಧನವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇಂತಿಫದಾ (Intifada) ಕುರಿತು ಮಾತನಾಡಿದ ಅವರು, ನಿಮ್ಮ ಇಂತಿಫದಾ ನಾಗರಿಕ ಸಂಹಾರದ ಆಟ ನಡೆಯಲ್ಲ. ಕೇಂದ್ರ ಒದ್ದು ಒಳಗೆ ಹಾಕಿದ್ರೂ ಬುದ್ದಿ ಬಂದಿಲ್ವಾ? ದೇಶದ ಬದ್ಧತೆಯ ಬಗ್ಗೆ ಎಚ್ಚರವಾಗಿಲ್ಲ ಅಂತ ಅಂದರೆ ಏನರ್ಥ? ಇದೇ ರೀತಿ ಮುಂದುವರಿದರೆ ಭಯಾನಕ ಸ್ಥಿತಿ ಎದುರಾಗುತ್ತದೆ. ದೇಶದ ಸುರಕ್ಷತೆಗಾಗಿ ಹಿಂದೂ ಸಮಾಜ ನಿಮ್ಮನ್ನು ಮೆಟ್ಟಿ ನಿಲ್ಲುತ್ತದೆ. ಪಿಎಫ್‌ಐ ಬಾಲ ಬಿಚ್ಚುವ ಕೆಲಸ ಮಾಡಬಾರದು ಎಂದು ಕಿಡಿಕಾರಿದ್ದಾರೆ.
ಮುಲ್ಲಾ, ಮೌಲ್ವಿಗಳು ಎಚ್ಚರಿಕೆ ಹೆಜ್ಜೆ ಇಡಿ. ಇದು ಮುಸ್ಲಿಂ ಸಮಾಜಕ್ಕೆ ಕಪ್ಪು ಚುಕ್ಕೆ. ನಿಮ್ಮ ಯುವಕರನ್ನು ಹದ್ದುಬಸ್ತಿನಲ್ಲಿ ಇಡಿ. ನಿಮ್ಮ ಯುವಕರಿಗೆ ದೇಶದ ಬದ್ಧತೆ, ದೇಶಪ್ರೇಮದ ಪಾಠ ಕಲಿಸಿ ಎಂದು ಸಲಹೆ ನೀಡಿದ್ದಾರೆ.