DistrictsKarnatakaLatestLeading NewsMain PostUttara Kannada

ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಪರೇಶ್ ಮೇಸ್ತಾನನ್ನು ಹತ್ಯೆ ಮಾಡಿಲ್ಲ. ಅದು ಆಕಸ್ಮಿಕವಾಗಿ ನಡೆದ ಸಾವು ಎಂದು ಸಿಬಿಐ (CBI) ಹೊನ್ನಾವರ ನ್ಯಾಯಾಲಯಕ್ಕೆ (Court) ವರದಿ ಸಲ್ಲಿಸಿದೆ.

ಹೊನ್ನಾವರದ ಪರೇಶ್ ಮೇಸ್ತಾ (Paresh Mesta) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಹೊನ್ನಾವರ (Honnavar) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ಹೊನ್ನಾವರ ನ್ಯಾಯಾಲಯ ನವೆಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿದೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈತನನ್ನು ಹಿಂದೂ ಸಂಘಟನೆಗಳು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಔಷಧಿ ನಕಲಿಯೋ? ಅಸಲಿಯೋ? – ಇನ್ಮುಂದೆ ನೀವೇ ಚೆಕ್ ಮಾಡಬಹುದು

ಹೊನ್ನಾವರ ರಣರಂಗವಾಗುತ್ತಿದ್ದಂತೆ ಎಚ್ಚೆತ್ತ ಅಂದಿನ ಸಿದ್ದರಾಮಯ್ಯ ಸರ್ಕಾರ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಂತರ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿತ್ತು. ನಾಲ್ಕೂವರೆ ವರ್ಷದ ನಂತರ ಸಿಬಿಐನಿಂದ ವರದಿ ಸಲ್ಲಿಸಿದೆ. ಇದನ್ನೂ ಓದಿ: ಸ್ಕ್ಯಾನ್‌ಮಾಡಿ `ಸಿದ್ರಾಮುಲ್ಲನ ಉಗ್ರಭಾಗ್ಯ’ ಲೀಲೆ ನೋಡಿ – PayCM ಅಭಿಯಾನಕ್ಕೆ ಬಿಜೆಪಿ ಟಕ್ಕರ್

Live Tv

Leave a Reply

Your email address will not be published. Required fields are marked *

Back to top button