ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದ(Teacher Recruitment Scam) ವಿಚಾರಣೆ ಸಂದರ್ಭ ಪಶ್ಚಿಮ ಬಂಗಾಳದ(West Bengal) ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ(Partha Chatterjee) ಅವರು, ನನಗೆ ಜಾಮೀನು ಕೊಡಿ, ನನ್ನನ್ನು ಬದುಕಲು ಬಿಡಿ ಎಂದು ನ್ಯಾಯಾಲಯದ(Court) ಮುಂದೆ ಕಣ್ಣಿರು ಹಾಕಿದ್ದಾರೆ.
ಬುಧವಾರ ಪಾರ್ಥ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ(Arpita Mukherjee) ನ್ಯಾಯಾಲಯಕ್ಕೆ ಹಾಜರಾಗಿದ್ದರೆ, ಪಾರ್ಥ ಚಟರ್ಜಿ 14 ದಿನಗಳ ಬಂಧನದ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
Advertisement
Advertisement
ಪಾರ್ಥ ಅವರ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದ್ದ ಸಂದರ್ಭ ಚಟರ್ಜಿ ತಮ್ಮ ಅಳಲು ತೋಡಿಕೊಂಡು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
Advertisement
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಪಾರ್ಥ ಚಟರ್ಜಿ ಅವರನ್ನು ಜುಲೈ 23 ರಂದು ಬಂಧಿಸಲಾಗಿತ್ತು. 3 ಸುತ್ತಿನ ಇಡಿ ವಿಚಾರಣೆಯ ಬಳಿಕ ಪ್ರಸ್ತುತ ಅವರನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇರಿಸಲಾಗಿದೆ. ವರ್ಚುವಲ್ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶ ಬಿದ್ಯುತ್ ಕುಮಾರ್ ರಾಯ್, ಪಾರ್ಥ ಅವರು ಬಯಸಿದರೆ ಏನು ಬೇಕಾದರೂ ಹೇಳಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಂಗೂಲಿ, ಜಯ್ ಶಾಗೆ ಸುಪ್ರೀಂನಿಂದ ಬಿಗ್ ರಿಲೀಫ್ – ಐಸಿಸಿಯ ಬಾಸ್ ಆಗ್ತಾರಾ ದಾದಾ?
Advertisement
ಪಾರ್ಥ ವಕೀಲರು, ದಿನಕ್ಕೆ 3 ಬಾರಿ ಔಷಧಿ ತೆಗೆದುಕೊಳ್ಳಬೇಕು. ಅವರಿಗೆ ನಿಯಮಿತ ಚಿಕಿತ್ಸೆಯ ಅಗತ್ಯವಿದೆ. ತನಿಖಾಧಿಕಾರಿಗಳು ಅವರ ಮನೆಯಲ್ಲಿ 30 ಗಂಟೆಗಳ ಕಾಲ ಹುಡುಕಾಡಿದರೂ ಏನೂ ಪತ್ತೆಯಾಗಿರಲಿಲ್ಲ. ಆದರೂ ಅವರಿಗೆ ಜಾಮೀನು ಸಿಕ್ಕಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಮೂಲಗಳ ಪ್ರಕಾರ ಹಲವು ಅಕ್ರಮ ವಹಿವಾಟುಗಳು ಪತ್ತೆಯಾಗಿವೆ. ಹಲವಾರು ಆಸ್ತಿಗಳು ಮತ್ತು ದಾಖಲೆಗಳ ಸ್ಥಳಗಳು ಸಹ ಪತ್ತೆಯಾಗಿವೆ. ಇವರ ಮೂಲಕ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲಾಗಿದೆ ಎಂದು ಇಡಿ ನ್ಯಾಯಾಲಯದಲ್ಲಿ ವಾದಿಸಿದೆ. ಇದುವರೆಗೆ ಪತ್ತೆಯಾಗಿರುವ ನೂರಾರು ಬ್ಯಾಂಕ್ ಖಾತೆಗಳನ್ನು ಉಲ್ಲೇಖಿಸಿದ ಇಡಿ ವಕೀಲರು, ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪಾರ್ಥ ಮತ್ತು ಅರ್ಪಿತಾರನ್ನು ಬಿಡುಗಡೆ ಮಾಡಬಾರದು. ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಯಿದೆ ಎಂದು ವಾದಿಸಿದರು. ಇದನ್ನೂ ಓದಿ: 6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು