ನವದೆಹಲಿ: ಬಿಜೆಪಿ(BJP) ನಾಯಕ ಸುಬ್ರಮಣಿಯಂ ಸ್ವಾಮಿ(Subramanian Swamy) ಅವರು ರಾಜ್ಯಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗಿದ್ದ ಬಂಗಲೆಯನ್ನು 6 ವಾರದೊಳಗೆ ವಾಪಸ್ ನೀಡುವಂತೆ ದೆಹಲಿ ಹೈಕೋರ್ಟ್(Delhi High Court )ತಿಳಿಸಿದೆ.
ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ನನಗೆ ಜೀವ ಬೆದರಿಕೆಯಿದೆ. ಹೀಗಾಗಿ ಜನವರಿ 2016ರಿಂದ ವಾಸಿಸುತ್ತಿದ್ದ ಬಂಗಲೆಯನ್ನು ಮರುಹಂಚಿಕೆ ಮಾಡಿ ಎಂದು ಕೋರಿದ್ದ ಸುಬ್ರಮಣಿಯಂ ಸ್ವಾಮಿ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
Advertisement
Advertisement
ಈ ಬಂಗಲೆಯನ್ನು 5 ವರ್ಷಕ್ಕೆ ನೀಡಲಾಗಿದೆ. ಈಗಾಗಲೇ ಅವಧಿಯು ಮುಕ್ತಾಯಗೊಂಡಿದೆ. ಝಡ್ ವರ್ಗದ ಭದ್ರತೆ ಪಡೆದವರಿಗೆ ವಸತಿ ಸೌಕರ್ಯವನ್ನು ಕಡ್ಡಾಯಗೊಳಿಸುವ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ ಎಂದು ತಿಳಿಸಿದೆ.
Advertisement
2016ರ ಜನವರಿಯಲ್ಲಿ ರಾಜ್ಯಸಭಾ ಸದಸ್ಯರಾದಾಗ ಸುಬ್ರಮಣಿಯಂ ಸ್ವಾಮಿಗೆ ಸರ್ಕಾರ 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆ ಮಂಜೂರು ಮಾಡಿತ್ತು. ಆದರೆ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅವರ ಅಧಿಕಾರವಧಿ ಅಂತ್ಯಗೊಂಡಿತ್ತು. ಇದರಿಂದಾಗಿ ಸರ್ಕಾರ ನೀಡಿದ್ದ ಬಂಗಲೆಯನ್ನು ಅವರು ಅಧಿಕಾರಿಗಳಿಗೆ ಹಸ್ತಾಂತರಿಸಬೇಕಿತ್ತು. ಆದರೆ ಸುಬ್ರಮಣಿಯಂ ಸ್ವಾಮಿ ಅವರು ನನಗೆ ಬೆದರಿಕೆ ಇದೆ. ಭದ್ರತೆ ದೃಷ್ಟಿಯಿಂದ ನಾನು ಇದೇ ಬಂಗಲೆಯಲ್ಲೇ ವಾಸಿಸುತ್ತೇನೆ ಎಂದು ತಿಳಿಸಿದ್ದರು.
Advertisement
ಈ ಸಂಬಂಧ ಕೇಂದ್ರದ ಪರವಾಗಿ ಎಎಸ್‍ಜಿ ಸಂಜಯ್ ಜೈನ್ ಹಾಜರಾಗಿ, ಸುಬ್ರಮಣಿಯಂ ಸ್ವಾಮಿಗೆ ಭದ್ರತೆಯನ್ನು ಒದಗಿಸುವುದನ್ನು ಸರ್ಕಾರ ಮುಂದುವರಿಸುತ್ತದೆ. ಆದರೆ ಬಂಗಲೆಯನ್ನು ಮರುಹಂಚಿಕೆ ಮಾಡಲು ಸಾಧ್ಯವಿಲ್ಲ. ಅವರು ದೆಹಲಿಯಲ್ಲಿ ಮನೆಯನ್ನು ಹೊಂದಿದ್ದು, ಅಲ್ಲಿ ಅವರು ಸ್ಥಳಾಂತರಗೊಳ್ಳಬಹುದು. ಅಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಕ್ಷಣಾ ಸಂಸ್ಥೆಗಳು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: Paytm, PayU ಕಚೇರಿ ಮೇಲೆ ಇಡಿ ದಾಳಿ
ಕೇಂದ್ರ ನೀಡಿದ ಉತ್ತರದಿಂದ ದೆಹಲಿ ಹೈಕೋರ್ಟ್ ಬಂಗಲೆಯನ್ನು 6 ವಾರದೊಳಗೆ ಖಾಲಿ ಮಾಡಬೇಕು ಎಂದು ಗಡುವು ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬೆಂಕಿ ಹಚ್ಚಿಸಲೆಂದೇ ಬಿಜೆಪಿ ಕೆಲವರನ್ನು ಇಟ್ಟುಕೊಂಡಿದೆ: ಲಕ್ಷ್ಮಣ್ ವಾಗ್ದಾಳಿ