ನವದೆಹಲಿ: ಜಾರಿ ನಿರ್ದೇಶನಾಲಯ(ED) ವನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಪೇಟಿಯಂ(Paytm) ಹಾಗೂ ಪಾವತಿ ಪರಿಹಾರಗಳನ್ನು ಒದಗಿಸುವ ಪೇಯುನ(PayU )ಕೆಲ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೇಟಿಯಂ ವಕ್ತಾರರು, ಇಡಿ ವಿವಿಧ ಪಾವತಿ ಸೇವಾ ಪೂರೈಕೆದಾರರಿಂದ ಕೆಲವು ವ್ಯಾಪಾರಿಗಳ ಬಗ್ಗೆ ಮಾಹಿತಿಗಳನ್ನು ಪಡೆಯುತ್ತಿದೆ. ನಾವು ಇಡಿ ಅಧಿಕಾರಿಗಳೊಂದಿಗೆ ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಚೀನಿ ಶೆಲ್ ಕಂಪನಿಗಳಿಗೆ ಹಣ ವರ್ಗಾವಣೆ ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಂಬೈ, ದೆಹಲಿ, ಲಕ್ನೋ, ಗುರುಗ್ರಾಮ, ಕೋಲ್ಕತ್ತಾದಲ್ಲಿರುವ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಪಲ್ ಆಯ್ತು ಈಗ ಭಾರತದಲ್ಲೇ ಪಿಕ್ಸೆಲ್ ಫೋನ್ ತಯಾರಿಸಲು ಮುಂದಾದ ಗೂಗಲ್
Advertisement
Advertisement
ಇತ್ತೀಚೆಗೆ ಇಡಿ ಆನ್‌ಲೈನ್ ಪಾವತಿಗಳ ವೇದಿಕೆಗಳಾದ ರೇಜರ್‌ಪೇ, ಪೇಟಿಯಂ ಹಾಗೂ ಕ್ಯಾಶ್‌ಫ್ರೀ ಕಂಪನಿಗಳ ಬೆಂಗಳೂರಿನ ಆವರಣಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಬೆಂಗಳೂರಿನ 6 ಸ್ಥಳಗಳಲ್ಲಿ ಶೋಧ ನಡೆಸಿದ್ದಾಗಿ ಇಡಿ ತಿಳಿಸಿತ್ತು. ಇದನ್ನೂ ಓದಿ: ನಟ ರಮೇಶ್ ಅರವಿಂದ್‌ಗೆ ಗೌರವ ಡಾಕ್ಟರೇಟ್
Advertisement
ದಾಳಿಯ ವೇಳೆ ಚೀನೀ ವ್ಯಕ್ತಿಗಳಿಂದ ನಿಯಂತ್ರಿತವಾಗಿದ್ದ ಘಟಕಗಳ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 17 ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಚೀನೀ ವ್ಯಕ್ತಿಗಳು ಭಾರತೀಯರ ನಕಲಿ ದಾಖಲೆಗಳನ್ನು ಬಳಸಿ, ವಂಚನೆ ನಡೆಸುತ್ತಿವೆ ಎಂದು ಇಡಿ ಆರೋಪಿಸಿದೆ.