ಮುಂಬೈ: ಮಹಾರಾಷ್ಟ್ರದ (Maharashtra) ರಾಜಧಾನಿ ಮುಂಬೈ (Mumbai) ಸಮೀಪದ ಕಲ್ಯಾಣ್ (Kalyan) ನಗರದಲ್ಲಿ ವಸತಿ ಪ್ರದೇಶಕ್ಕೆ ಗುರುವಾರ ಚಿರತೆಯೊಂದು (Leopard) ನುಗ್ಗಿದೆ. ಕಟ್ಟಡವೊಂದರೊಳಗೆ ಪ್ರವೇಶಿಸಿದ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.
ವಸತಿ ಪ್ರದೇಶದಲ್ಲಿ ಚಿರತೆಯನ್ನು ಕಂಡು ನಿವಾಸಿಗಳು ಭಯಭೀತರಾಗಿದ್ದಾರೆ. ಚಿರತೆ ಕೆಲ ಕಟ್ಟಡದ ಮಹಡಿಗಳಲ್ಲಿ ಕಿಟಕಿಗಳನ್ನು ಜಿಗಿದು ಸಾಗಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ, ಚಿರತೆಯನ್ನು ಸೆರೆಹಿಡಿಯುವ ಪ್ರಯತ್ನ ಮಾಡಿದ್ದಾರೆ.
Advertisement
Leopard Strays Into Residential Area In Kalyan, Video Shows It Moving Across Building Window – A leopard that entered a residential building in Chinchpada locality, in #Kalyan 3 people were reportedly injured in attacks by a leopard near #Mumbai #Maharashtra #Leopard #wildlife pic.twitter.com/dv0Cw1R4Ux
— KRoshan (@kroshan4mobile) November 24, 2022
Advertisement
ನಾನು ಮೊದಲ ಮಹಡಿಯಲ್ಲಿ ಚಿರತೆಯನ್ನು ನೋಡಿದೆ. ಜನರು ಸಹಾಯಕ್ಕಾಗಿ ಕಿರುಚುತ್ತಿದ್ದರು. ಒಬ್ಬರಿಗೆ ಕಟ್ಟಡದೊಳಗೆ ಹೋಗದಂತೆ ಎಚ್ಚರಿಕೆಯನ್ನು ನೀಡಲಾಯಿತು. ಆದರೂ ಅವರು ಮಾತು ಕೇಳದೇ ಕಟ್ಟಡದೊಳಗೆ ಪ್ರವೇಶಿಸಿದರು ಹಾಗೂ ಚಿರತೆ ದಾಳಿಗೊಳಗಾದರು. ನಮ್ಮಲ್ಲಿ ಕೆಲವರು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಅದನ್ನು ಹೆದರಿಸಿ ಓಡಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗೆಳತಿಯನ್ನು ಮೆಚ್ಚಿಸಲು ಕಾರ್ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ
Advertisement
Advertisement
ಬುಧವಾರ ಮಹಾರಾಷ್ಟ್ರದ ನಾಸಿಕ್‌ನ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಅದನ್ನು ಬಂಧಿಸಲು ಮಧ್ಯರಾತ್ರಿಯ ವೇಳೆಗೆ ಪಂಜರಗಳನ್ನು ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಸ್ಥಿತಿ ಅಂಡು ಸುಟ್ಟ ಬೆಕ್ಕಿನಂತಾಗಿದೆ – ಯತ್ನಾಳ್ ಲೇವಡಿ